ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕೌಶಲ್ಯಭರಿತ, ಸೇವಾ ಮನೋಭಾವದ ವ್ಯಕ್ತಿತ್ವ ನಿರ್ಮಾಣ ಸಾಧ್ಯ.
ಉಡುಪಿ:“ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಒಂದು ಒಳ್ಳೆಯ ವೇದಿಕೆ.ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಮಾಜಕ್ಕೆ ತಮ್ಮಿಂದ ಸಾಧ್ಯವಾದ ಕೊಡುಗೆಗಳನ್ನು ಕೊಡಬೇಕು.

ಎನ್ನೆಸ್ಸೆಸ್ ನಿಂದ ಒಬ್ಬ ವಿದ್ಯಾರ್ಥಿ ರಚನಾತ್ಮಕವಾಗಿ ರೂಪುಗೊಳ್ಳುತ್ತಾನೆ” ಎಂದು ಡಾ.ಗಣನಾಥ ಎಕ್ಕಾರು ಅಭಿಪ್ರಾಯಪಟ್ಟರು.
ಉಡುಪಿಯ ಶ್ರೀ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ ಮತ್ತು ಆಂತರಿಕ ಗುಣಮಟ್ಟ ಘಟಕದ ಮಾರ್ಗದರ್ಶನದೊಂದಿಗೆ ನೆರವೇರಿದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಉದ್ಘಾಟನೆಯ ನಂತರ ಸ.ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಅವರು ಮಾನವ ಹಕ್ಕುಗಳ ಮಹತ್ವ ಎನ್ನುವ ವಿಚಾರದ ಕುರಿತು ಮಾತನಾಡಿ, ಭಾರತ ಹಾಗೂ ಜಗತ್ತಿನ ಇನ್ನಿತರ ಭಾಗದಲ್ಲಿರುವ ಮಾನವ ಹಕ್ಕುಗಳ ಕುರಿತು ವಾಸ್ತವಿಕ ಸಂಗತಿಗಳನ್ನು ಉಲ್ಲೇಖಿಸುತ್ತಾ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ವಿನಾಯಕ್ ಪೈ, ಘಟಕದ ಯೋಜನಾಧಿಕಾರಿಗಳಾದ ಚಿರಂಜನ್ ಕೆ.ಶೇರಿಗಾರ್, ವಿದ್ಯಾರ್ಥಿ ಪ್ರತಿನಿಧಿಗಳಾದ ವಿಜಯಲಕ್ಷ್ಮೀ, ಭೂಷಣ್ ಕುಮಾರ್, ರಚನಾ, ಪ್ರಜ್ವಲ್ ನಾಯಕ್ ಉಪಸ್ಥಿತರಿದ್ದರು.
ಘಟಕದ ಯೋಜನಾಧಿಕಾರಿ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ,ವನಿತಾ ಭಟ್ ವಂದಿಸಿದರು.
ವಾಗೀಶ್ ಕೆದ್ಲಾಯ ಕಾರ್ಯಕ್ರಮ ನಿರೂಪಿಸಿದರು.