ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಗೆ 23 ಬಹುಮಾನ
ಬಂಟ್ವಾಳ: ಯಾಮತೋ ಶೋಟೋಕನ್ ಕರಾಟೆ ಅಸೋಶಿಯೇಶನ್ ಟ್ರಸ್ಟ್ (ರಿ) ಮಂಗಳೂರು ಇವರು ಆಯೋಜಿಸಿದ ಇದೇ ಮೊದಲ ಬಾರಿಗೆ ಬಿ.ಸಿ.ರೋಡಿನಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಪಂದ್ಯಾಟದಲ್ಲಿ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ 21 ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ 8 ಚಿನ್ನ, 10 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಗಳಿಸಿರುತ್ತಾರೆ.
ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ್ ಶೆಣೈ, ಶಾಲಾ ಮುಖ್ಯ ಶಿಕ್ಷಕಿ ರೋಶನಿ ತಾರಾ ಡಿಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ , ಕರಾಟೆ ತರಗತಿಯ ಉಸ್ತುವಾರಿಗಳಾದ ಭವ್ಯ ಹಾಗೂ ಕು. ವಿಜೇತ, ಕರಾಟೆ ತರಬೇತುದಾರರಾದ ರೆನ್ಸಿ ಜೆರಾಲ್ಡ್ ಫೆರ್ನಾಂಡೀಸ್ ಪೆದಮಲೆ, ಸಹ ತರಬೇತುದಾರರಾದ ವಿಜಯ್ ಫೆರ್ನಾಂಡೀಸ್ ಹಾಗು ಜೇಸನ್ ಮನೀಷ್ ಅವರು ಅಭಿನಂದಿಸಿದರು.