ಶುದ್ಧ ಕುಡಿಯುವ ನೀರಿನ ಸಂಪರ್ಕಕ್ಕಾಗಿ ೧ ಕೋಟಿ ೯೬ ಲಕ್ಷದ ಕಾಮಗಾರಿಗೆ ಪುತ್ತೂರು ಶಾಸಕ ಶಿಲಾನ್ಯಾಸ
ವಿಟ್ಲ : ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಕುಂಡಡ್ಕದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಯೋಜನೆಯಾದ ಹರ್ ಘರ್ ಜಲ್ ಮನೆ ಮನೆಗೆ ಗಂಗೆ
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ಒದಗಿಸಲಾದ ೧ ಕೋಟಿ ೯೬ ಲಕ್ಷದ ಕಾಮಗಾರಿಗೆ ಪುತ್ತೂರು ಶಾಸಕ ಶಿಲಾನ್ಯಾಸ ನೆರವೇರಿಸಿದರು.

ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಇಂಜಿನೀಯರ್ ಜಗದೀಶ್, ಹರಿಪ್ರಸಾದ್ ಯಾದವ್, ತೀರ್ಥರಾಮ ಗೌಡ, ದಯಾನಂದ ಶೆಟ್ಟಿ ಉಜಿರೆಮಾರ್, ನರ್ಸಪ್ಪ ಪೂಜಾರಿ, ಶಶಿಕಾಂತ, ಮಹಬಲೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.