ವಿಟ್ಲ ಸುವರ್ಣ ಮಹೋತ್ಸವದ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ‘ಇನ್‌ಸ್ಪಯರ್ ಫಾರ್ ಯುವರ್ ಸಕ್ಸಸ್ ೨೦೨೨-೨೩’ ಕಾರ್ಯಕ್ರಮ
ವಿಟ್ಲ: ವಿಠಲ ಎಜುಕೇಶನ್ ಸೊಸೈಟಿ ವಿಟ್ಲ, ವಿಠಲ ಪದವಿ ಪೂರ್ವ ಕಾಲೇಜು ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ‘ಇನ್‌ಸ್ಪಯರ್ ಫಾರ್ ಯುವರ್ ಸಕ್ಸಸ್ ೨೦೨೨-೨೩’ ಕಾರ್ಯಕ್ರಮ ವಿಠಲ ಸುರ್ಣ ರಂಗ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಗ್ರಾಮ ಕರಣಿಕರು ಬಂಟ್ವಾಳ ತಾಲೂಕು ಕಛೇರಿ ಶ್ರೀಕಲಾ ಇವರು ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಜಪ್ಪ ಪೂಜಾರಿ ನಿಡ್ಯ ಇವರು ಭಾಗವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ನಿತ್ಯಾನಂದ ನಾಯಕ್ ಮತ್ತು ಭವಾನಿ ರೈ ಕೊಲ್ಯ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಕಲಾ ಮತ್ತು ದೇಜಪ್ಪ ಪೂಜಾರಿ ನಿಡ್ಯ ಇವರನ್ನು ಸನ್ಮಾನಿಸಲಾಯಿತು.
ಪ್ರಾಂಸುಪಾಲ ಆದರ್ಶ ಚೊಕ್ಕಾಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕರುಗಳಾದ ಅರುಣಾ ವಂದಿಸಿದರು. ಮುಕ್ತಾಶ್ರೀ ನಿರೂಪಿಸಿದರು. ಆಶಾ ಮತ್ತು ಚಂದ್ರಕಾಂತ ಸಹಕರಿಸಿದರು.