ಗುರುಪುರ ಶ್ರೀ ವರದರಾಜ ವೆಂಕಟರವಣ ದೇವಳದಲ್ಲಿ ನ. ೨೮-ಡಿ.೪ರತನಕ ‘ಭಜನಾ ಸಪ್ತಾಹ ಮಹೋತ್ಸವ’
ಕೈಕಂಬ: ಗುರುಪುರದ ಶ್ರೀ ವರದರಾಜ ವೆಂಟಕರಮಣ ದೇವಸ್ಥಾನದಲ್ಲಿ ನ. ೨೮ರಿಂದ ಡಿಸೆಂಬರ್ ೪ರವರೆಗೆ ಶ್ರೀ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಅನಗ್ರಹದೊಂದಿಗೆ ಶ್ರೀರಾಮ ನಾಮ ಸಂಕೀರ್ತನೆಯೊಂದಿಗೆ ‘ಭಜನಾ ಸಪ್ತಾಹ ಮಹೋತ್ಸವ’ ಜರುಗಲಿದೆ.
ನ. ೨೮ರಂದು ಹತ್ತು ಸಮಸ್ತರಿಂದ ಮಹಾ ಪ್ರಾರ್ಥನೆ, ಸಪ್ತಾಹ ಭಜನಾರಂಭದೊಂದಿಗೆ ದ್ವೀಪ ಪ್ರಜ್ವಲನೆ, ಭಜನಾ ಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ದೇವರು ವಿರಾಜಮಾನವಾಗಲಿದ್ದಾರೆ. ಬಳಿಕ ಪ್ರತಿ ದಿನರಾತ್ರಿ ಭಜನೆ, ವಿಶೇಷ ಪೂಜೆ ನಡೆಯಲಿದೆ.
ನ. ೪ರಂದು ಸಂಜೆ ೫ಕ್ಕೆ ದೇವಸ್ಥಾನಕ್ಕೆ ಶ್ರೀ ಕಾಶಿ ಮಠಾಧೀಶರ ಆಗಮನ, ಶ್ರೀ ವರದರಾಜ ಭಜನಾ ಮಂಡಳಿಯ ಶ್ರೀ ಗೋಪಾಲಕೃಷ್ಣ ದೇವರಿಗೆ ಆರತಿ, ಸಮಸ್ತರಿಂದ ಪಾದಪೂಜೆ ನಡೆಯಲಿದೆ. ಬಳಿಕ ಅವರು ಮೂಡಬಿದ್ರಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾತ್ರಿ ೧೦ಕ್ಕೆ ರಜತ ಲಾಲಕಿಯಲ್ಲಿ ಗೀತಾಜಯಂತಿ ಉತ್ಸವ, ಶ್ರೀ ರಾಮನಾಥ ದಾಮೋದರ ದೇವಳದಿಂದ ನಜರು ಕಾಣಿಕೆ ಮೆರವಣಿಗೆ ಹಾಗೂ ಮಹಾಪೂಜೆ ನಡೆಯಲಿದೆ.