ಬಂಟ್ವಾಳ ಜೆಸಿಐ ಅಧ್ಯಕ್ಷರಾಗಿ ಆಯ್ಕೆ
ಬಂಟ್ವಾಳ: ಇಲ್ಲಿನ ಜೆಸಿಐ ಘಟಕದ ನೂತನ ಅಧ್ಯಕ್ಷರಾಗಿ ಸೃಜನಶೀಲ ಛಾಯಾಗ್ರಾಹಕ ರಾಜೇಂದ್ರ ಕೆ. ಇವರು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ರೋಷನ್ ರೈ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿ ಈಚೆಗೆ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.

ಕಾರ್ಯದರ್ಶಿಯಾಗಿ ರಶ್ಮಿ ವಚನ್ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಗಣೇಶ್ ಕುಲಾಲ್, ಕಿರಣ್, ಮನೋಜ್ ಕನಪಾಡಿ, ವಚನ್ ಶೆಟ್ಟಿ, ಕಿಶೋರ್ ಆಚಾರ್ಯ, ವಿದ್ಯಾ ಉಮೇಶ್, ಸಂಯೋಜಕರಾಗಿ ಲೋಕೇಶ್ ಸುವರ್ಣ, ಮಹಿಳಾ ಸಂಯೋಜಕಿಯಾಗಿ ದೀಪ್ತಿ ರೋಷನ್ ರೈ, ಜೆಜೆಸಿ ಅಧ್ಯಕ್ಷರಾಗಿ ಜಯರಾಜ್ ಆಯ್ಕೆಗೊಂಡರು.