ಅಂಧೇರಿ ಉಪ ಚುನಾವಣೆ: ಋತುಜಾ ರಮೇಶ್ ಲಟ್ಕೆ ಅವರನ್ನು ಅಭಿನಂದಿಸಿದ ಲಕ್ಷ್ಮಣ ಪೂಜಾರಿ
ಮುಂಬಯಿ : ಕಳೆದ ವಾರ ನಡೆದ ಮುಂಬಯಿ ಅಂಧೇರಿ ಪೂರ್ವದ ಉಪಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ ಪಕ್ಷದಿಂದ ಸ್ಪರ್ಧಿಸಿದ ಋತುಜಾ ರಮೇಶ್ ಲಟ್ಕೆ ಭಾರೀ ಮತಗಳಿಂದ ವಿಜೇತರಾದರು.
![](https://www.suddi9.com/wp-content/uploads/2022/11/IMG-20221110-WA0035-525x700.jpg)
ಪತಿಯ ಅಗಲಿಕೆಯಿಂದ ತೆರವಾದ ಸ್ಥಾನದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 45,211 ಮತಗಳಿಂದ ಭರ್ಜತಿ ಜಯಗಳಿಸಿದ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಅಭ್ಯರ್ಥಿ ಋತುಜಾ ರಮೇಶ್ ಲಟ್ಕೆ ಅವರನ್ನು ಇಂದಿಲ್ಲಿ ಗುರುವಾರ ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ)ಯ ಉತ್ತರ ಮಧ್ಯ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಸಿ. ಪೂಜಾರಿ, ಎನ್ ಸಿಪಿ ವಾಯವ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ್ ಲಕ್ಷ್ಮಣ ಪೂಜಾರಿ ಭೇಟಿಯಾಗಿ ಅಭಿನಂದಿಸಿದರು. ಋತುಜಾ ಅವರ ಮುಂದಿನ ರಾಜಕೀಯ ಜೀವನಕ್ಕೆ ಶುಭ ಹಾರೈಸಿದರು.
![](https://www.suddi9.com/wp-content/uploads/2022/11/IMG-20221110-WA0036-525x700.jpg)