ಬಂಟ್ವಾಳ: ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಶುಕ್ರವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕನಕದಾಸರ ಜಯಂತಿ ಆಚರಣೆ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಆಚರಿಸಲಾಯಿತು.

ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ಅವರು ದೀಪ ಬೆಳಗಿಸಿ, ಭಕ್ತಿಯ ಮಹತ್ವ ಸಾರಿದ ಕನಕದಾಸರು ತನ್ನ ಕಾಲದ ಸಮಾಜದಲ್ಲಿದ್ದ ಅಸಮಾನತೆಗಳನ್ನು ವಿರೋಧಿಸಿದರು.
ಸಾಹಿತ್ಯ ಮತ್ತು ಸಂಗೀತದದ ದೃಷ್ಟಿಯಿಂದಲೂ ಕನಕದಾಸರ ಕೊಡುಗೆ ಗಣನೀಯವಾದದ್ದು ಎಂದು ಹೇಳಿದರು.
ಒನಕೆ ಓಬವ್ವ ರಾಜಮನೆತನದಲ್ಲಿ ಜನಿಸದೇ ಇದ್ದರೂ ವೀರರಾಣಿಯರ ಸಾಲಲ್ಲಿ ನಿಂತು ಗೌರವ ಪಡೆಯುತ್ತಿರುವವಳು. ತನ್ನ ರಾಜ್ಯವನ್ನು ಉಳಿಸಲು ಓಬವ್ವ ಮಾಡಿದ ತ್ಯಾಗ ಎಲ್ಲರಿಗೂ ಆದರ್ಶಪ್ರಾಯವಾದದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚುನಾವಣೆ ಶಾಖೆಯ ವಿಷಯ ನಿರ್ವಾಹಕ ನಾರಾಯಣ ಗೌಡ ಕನಕದಾಸರ ಹಾಗೂ ಒನಕೆ ಓಬವ್ವರವರ ಬಗ್ಗೆ ಸಂಕ್ಷಿಪ್ತವಾಗಿ
ಮಾತನಾಡಿದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ರವಿ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಉಪಸ್ಥಿತರಿದ್ದರು
ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ಸ್ವಾಗತಿಸಿ ವಂದಿಸಿದರು.
