ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ಬಂಟ್ವಾಳ: ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ೩ ಪ್ರಥಮ ಸ್ಥಾನ, ೨ ದ್ವಿತೀಯ ಸ್ಥಾನ ಹಾಗೂ ೧ ತೃತೀಯ ಸ್ಥಾನ ಪಡೆದಿರುತ್ತಾರೆ.
ಆಶುಭಾಷಣ ಸ್ಪರ್ಧೆಯಲ್ಲಿ ೭ನೇ ತರಗತಿಯ ಪವನ್ ನಾಯಕ್ ಪ್ರಥಮ ಸ್ಥಾನ, ಸಂಸ್ಕೃತ ಕಂಠಪಾಠದಲ್ಲಿ ೭ನೇ ತರಗತಿಯರಮ್ಯಭಟ್ ಪ್ರಥಮ ಸ್ಥಾನ, ಭಕ್ತಿಗೀತೆ ಸ್ಫರ್ಧೆಯಲ್ಲಿ ೪ನೇ ತರಗತಿಯ ಅಪ್ರಮೇಯ ಪ್ರಥಮ ಸ್ಥಾನ, ಚಿತ್ರಕಲೆ ಸ್ಪರ್ಧೆಯಲ್ಲಿ ೫ನೇ ತರಗತಿಯ ನಿನಾದ್ ಕೈರಂಗಳ್ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ೭ನೇ ತರಗತಿಯ ಶ್ರೀವತ್ಸ ದ್ವಿತೀಯ, ೩ನೇ ತರಗತಿಯ ಶ್ರೀರಾಮ ತೃತೀಯ ಸ್ಥಾನ ಪಡೆದಿರುತ್ತಾರೆ.