ಜಕ್ರಿಬೆಟ್ಟು: ನೂತನ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ಸಿಎಂ ಬೊಮ್ಮಾಯಿ ಆಗಮನಕ್ಕೆ ನಿರೀಕ್ಷೆ: ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಜಕ್ರಿಬೆಟ್ಟು ಮತ್ತು ನರಿಕೊಂಬು ನಡುವೆ ನೇತ್ರಾವತಿ ನದಿಗೆ ಅಡ್ಡವಾಗಿ ರೂ ೧೩೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸೇತುವೆ ಬಳಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಗುರುವಾರ ಭೇಟಿ ನೀಡಿ ವೀಕ್ಷಿಸಿದರು.

ಇಲ್ಲಿನ ಜಕ್ರಿಬೆಟ್ಟು ಮತ್ತು ನರಿಕೊಂಬು ನಡುವೆ ನೇತ್ರಾವತಿ ನದಿಗೆ ಅಡ್ಡವಾಗಿ ರೂ ೧೩೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸೇತುವೆ ಶೀಘ್ರವೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂದು ಭೂಮಿ ಪೂಜೆ ನೆರವೇರಿಸುವರು ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಜಕ್ರಿಬೆಟ್ಟು ಬಳಿ ನಿರ್ಮಾಣಗೊಳ್ಳಲಿರುವ ನೂತನ ಸೇತುವೆ ಕಾಮಗಾರಿಗೆ ನಡೆಯುತ್ತಿರುವ ಸಿದ್ಧತೆ ಬಗ್ಗೆ ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸೇತುವೆಯಿಂದ ಗ್ರಾಮ ಮತ್ತು ನಗರ ಪ್ರದೇಶಕ್ಕೆ ತ್ವರಿತ ವಾಹನ ಸಂಚಾರ ಮತ್ತು ಕುಡಿಯುವ ನೀರು ಸಂಗ್ರಹಣೆಯೂ ಸಾಧ್ಯವಾಗುತ್ತದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಆಧ್ಯಕ್ಷ ಬಿ.ದೇವದಾಸ ಶೆಟ್ಟಿ, ಡೊಂಬಯ ಅರಳ, ರಮಾನಾಥ ರಾಯಿ, ರವೀಶ್ ಶೆಟ್ಟಿ ಕರ್ಕಳ ಮತ್ತಿತರರು ಇದ್ದರು.