ಅಡ್ಯನಡ್ಕ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಅಕ್ಟೋಬರ್ 28 ಮತ್ತು 29ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್
ಕನ್ಯಾನ ಇಲ್ಲಿ ನಡೆದ ವಿಟ್ಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಡ್ಯನಡ್ಕ ಜನತಾ ಪ್ರೌಢಶಾಲೆ ಹಲವು ಬಹುಮಾನಗಳನ್ನು
ಗಳಿಸಿದ್ದು, 17ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಸತತ 8ನೇ ಬಾರಿ ತಂಡ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತದೆ.
ಹತ್ತನೇ ತರಗತಿಯ ತೇಜಸ್ವಿನಿ ವೈಯಕ್ತಿಕ ಚಾಂಪಿಯನ್ ಬಹುಮಾನ ಪಡೆದಿದ್ದಾರೆ.

ವಿಜೇತರ ವಿವರ ಹೀಗಿದೆ.
17ರ ವಯೋಮಾನದೊಳಗಿನ ವಿಭಾಗದ ಬಾಲಕಿಯರು:
ತೇಜಸ್ವಿನಿ – 3000 ಮೀ ಓಟ ಪ್ರಥಮ, 100 ಮೀ ಓಟ ಪ್ರಥಮ, 200 ಮೀ ಓಟ ದ್ವಿತೀಯ.
ನುಸೈಬ – ಹ್ಯಾಮರ್ ಥ್ರೋ ಪ್ರಥಮ.
ಯಶಸ್ವಿನಿ ಎನ್. – ಕೋಲುಜಿಗಿತ ಪ್ರಥಮ, ಹ್ಯಾಮರ್ ಥ್ರೋ ದ್ವಿತೀಯ.
ಜ್ಯೋತಿ – ನಡಿಗೆ ಸ್ಪರ್ಧೆ ತೃತೀಯ.
ತುಳಸಿ – 400 ಮೀ. ಓಟ ತೃತೀಯ.
ಮೋನಿಶಾ – ಎತ್ತರ ಜಿಗಿತ ಪ್ರಥಮ, ಕೋಲು ಜಿಗಿತ ದ್ವಿತೀಯ.
17ರ ವಯೋಮಾನದ ಬಾಲಕರು:
ಮಾತೇಶ್ – ಹ್ಯಾಮರ್ ಥ್ರೋ ಪ್ರಥಮ.
ಆದಿತ್ಯ – ಹ್ಯಾಮರ್ ಥ್ರೋ ತೃತೀಯ.
ಮಹಮ್ಮದ್ ಸಿನಾನ್ – ಈಟಿ ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ.
ಹಾಫಿಲ್ – ಉದ್ದಜಿಗಿತ ತೃತೀಯ, ಕೋಲುಜಿಗಿತ ದ್ವಿತೀಯ.
ಹರ್ಷಿತ್ – ನಡಿಗೆ ಸ್ಪರ್ಧೆ ದ್ವಿತೀಯ.
ಸನತ್ – ನಡಿಗೆ ಸ್ಪರ್ಧೆ ತೃತೀಯ, ಕೋಲು ಜಿಗಿತ ತೃತೀಯ.
14ರ ವಯೋಮಾನದ ಬಾಲಕಿಯರು:
ಆಯಿಷತ್ ನೆಹನೂರ – ಗುಂಡೆಸೆತ ದ್ವಿತೀಯ, ಉದ್ದಜಿಗಿತ ತೃತೀಯ.
14ರ ವಯೋಮಾನದ ಬಾಲಕರು:
ಪವನ್ಕುಮಾರ್ ಮತ್ತು ಬಳಗ ರಿಲೇ ಸ್ಪರ್ಧೆಯಲ್ಲಿ ತೃತೀಯ.
ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಆರ್. ನಾಯ್ಕ್ ಅವರ ನೇತೃತ್ವದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪಿ. ಉದಯಕೃಷ್ಣ ಭಟ್
ತರಬೇತಿ ನೀಡಿದ್ದು, ತಂಡದ ವ್ಯವಸ್ಥಾಪಕರಾಗಿ ಸಹಶಿಕ್ಷಕಿ ಶ್ರೀಮತಿ ಕುಸುಮಾವತಿ ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದಾರೆ. ಶಾಲಾ
ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
