ಮುಂಬೈ: ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಾಗರಿಕ ಅಧಿಕಾರಿಗಳು ರಸ್ತೆ ಸುರಕ್ಷತೆ ಕ್ರಮಗಳು ಮತ್ತು ನಿಯಮಗಳನ್ನು ಹೆಚ್ಚಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲಾ ಮುಂಬೈ (Mumbai) ಪೊಲೀಸರು, ಚಾಲಕರು ಮತ್ತು ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದಾರೆ. 2022ರ ನವೆಂಬರ್ 1ರಿಂದ ಹಿಂಭಾಗ ಕುಳಿತುಕೊಳ್ಳುವವರು ಸಹ ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ.

ನ.1 ರಿಂದ ಮುಂಬೈನಲ್ಲಿ ಜಾರಿಗೆ ಬರಲಿರುವ ಸೀಟ್ ಬೆಲ್ಟ್ ನಿಯಮಗಳು
* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
* ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ
* ಸುರಕ್ಷತಾ ಬೆಲ್ಟ್ ಸೌಲಭ್ಯವಿಲ್ಲದ ವಾಹನಗಳಲ್ಲಿ ಸೀಟ್ ಬೆಲ್ಟ್ ಸ್ಥಾಪಿಸಲು 2022ರ ನವೆಂಬರ್ 1ರವರೆಗೆ ಸಮಯ ನೀಡಲಾಗುತ್ತದೆ.
* 2022ರ ನವೆಂಬರ್ 1ರಿಂದ ಮುಂಬೈನಲ್ಲಿ ಪ್ರಯಾಣಿಸುವಾಗ ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು.

ಒಟ್ಟಾರೆ ಕಾರಿನಲ್ಲಿ ಪ್ರಯಾಣಿಸುವ ಚಾಲಕ ಮತ್ತು ಪ್ರಯಾಣಿಕರು ಮುಂಬೈನಲ್ಲಿ ಸೀಟ್ ಬೆಲ್ಟ್ ಅನ್ನು ನವೆಂಬರ್ 1ರಿಂದ ಧರಿಸಬೇಕು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಇದ್ದರೆ ಅವರ ವಿರುದ್ಧ ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ರ ಸೆಕ್ಷನ್ 194 (ಬಿ) (1) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

By suddi9

Leave a Reply

Your email address will not be published. Required fields are marked *