ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಮಂತ್ರಣಪತ್ರ ಶಾಸಕರಿಂದ ಬಿಡುಗಡೆ
ಬಂಟ್ವಾಳ: ನವೆಂಬರ್ 12 ಮತ್ತು 13ರಂದು ಅಮ್ಮುಂಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಒಡ್ಡೂರು ಫಾರ್ಮ್ಸ್ ನಲ್ಲಿ ಶನಿವಾರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ, ಸ್ವಾಗತ ಸಮಿತಿ ಅಧ್ಯಕ್ಷರಾದ ಉಮೇಶ್ ಸಾಲಿಯಾನ್ ಬೆಂಜನಪದವು, ಕಾರ್ಯಾಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆಗುತ್ತು, ಪ್ತಧಾನ ಸಂಚಾಲಕರಾದ ಅಬುಬಕ್ಕರ್ ಅಮ್ಮುಂಜೆ, ಉಪಾಧ್ಯಕ್ಷರಾದ ಪೊಳಲಿ ವೆಂಕಟೇಶ ನಾವಡ, ಅಮ್ಮುಂಜೆ ಗ್ರಾಮ ಪಂಚಾಯತಿ ಅಧ್ಯಕ್ಷ ವಾಮನ ಆಚಾರ್ಯ, ಸ್ವಾಗತ ಸಮಿತಿ ಜೊತೆಕಾರ್ಯದರ್ಶಿ ಪ್ರಸಾದ್ ಕೊಳಂಬೆಕೋಡಿ, ಆರ್ಥಿಕ ಸಮಿತಿ ಸಂಚಾಲಕ ಸುಕೇಶ್ ಚೌಟ, ಮೆರವಣಿಗೆ ಸಮಿತಿ ಸಂಚಾಲಕ ಕಾರ್ತಿಕ್ ಬಲ್ಲಾಳ್, ಪ್ರಮುಖರಾದ ನಾರಾಯಣ ಅಮ್ಮುಂಜೆ, ಕಸಾಪ ತಾಲೂಕು ಘಟಕದ ಗೌ.ಪ್ರಧಾನ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಮಾರ್ಗದರ್ಶನ ಮಂಡಳಿ ಸದಸ್ಯ ಹರೀಶ ಮಾಂಬಾಡಿ ಉಪಸ್ಥಿತರಿದ್ದರು. ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ವಂದಿಸಿದರು.