ಬಂಟ್ವಾಳ: ದೀಪಾವಳಿ ಹಬ್ಬದ ಪ್ರಯುಕ್ತ ಬಂಟ್ವಾಳ ಮತ್ತು ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಎರಡು ಬ್ಲಾಕ್ ವ್ಯಾಪಿಯ ಪ್ರತ್ಯೇಕ ಕಡೆಯಲ್ಲಿ “ಗೋ ಪೂಜೆ” ಯನ್ನು ಆಚರಿಸಲಾಯಿತು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವ್ಯಾಪ್ರಿಯ ಬಡಗ ಕಾಜೆಕಾರ್ ಗ್ರಾಮದ ಸುಧಾಕರ್ ಶಣೈ ಖಂಡಿಗ ಇವರ ಮನೆಯಲ್ಲಿ ಗೋಪೂಜೆ ನಡೆದರೆ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಳ್ಳಿಗೆ ಗ್ರಾಮದ ದಿವಾಕರ ಪಂಬದಬೆಟ್ಟು ರವರ ಮನೆಯಲ್ಲಿ ಗೋಪೂಜೆಯನ್ನು ಆಚರಿಸಲಾಯಿತು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶಣೈ,ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೋರಸ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯಪಿಯೂಸ್ ರೊಡ್ರಿಗಸ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಅಕ್ರಮ-ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸುಕನ್ಯಾ ಶಣೈ,ಮಾಜಿ ಗ್ರಾ. ಪಂ. ಉಪಾಧ್ಯಕ್ಷ ಅಬ್ದುಲ್ಲಾ,ಪದ್ಮನಾಭ ಸಾವಂತ್ ವಾಮದಪದವು ಮೊದಲಾದವರು ಉಪಸ್ಥಿತರಿದ್ದರು.

ಆದೇ ರೀತಿ ಕಳ್ಳಿಗೆಯಲ್ಲಿ ನಡೆದ ಗೋಪೂಜೆಯ ವೇಳೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ವಿ.ಪೂಜಾರಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಜಿ.ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಎಂ.ಎಸ್ ಮಹಮ್ಮದ್,ಪಿಯೂಷ್ ಎಲ್ ರೋಡ್ರಿಗಸ್,ಸದಾಶಿವ ಬಂಗೇರ, ವಾಸುಪೂಜಾರಿ ಲೊರೆಟ್ಟೊಪದವು,ಪದ್ಮನಾಭರೈ, ಶಿವಪ್ರಸಾದ್ ಕನಪ್ಪಾಡಿ,ರೋಶನ್ ರೈ,ಮಧುಸೂದನ್ ಶೆಣೈ,ರವಿರಾಜ್ ಜೈನ್,ಮಲ್ಲಿಕಾ ಶೆಟ್ಟಿ, ವಿಲ್ಮಾ ಮೊರಸ್, ಮಂಜುಳಾ ಕುಶಲ,ಜೋಸ್ಪಿನ್ ಡಿ ಸೋಜಾ, ಐಡಾ ಸುರೇಶ್,ಗಾಯತ್ರಿ ಪ್ರಕಾಶ್,ಪ್ಪೋಸಿ ಡಿ.ಸೋಜಾ,ಮಲ್ಲಿಕಾ ಪಕ್ಕಳ,ಪ್ರೇಮಲತಾ,ಲೀನಾ,ಜೆಸಿಂತಾ ಉಪಸ್ಥಿತರಿದ್ದರು.
