ಅ.29 ರಿಂದ ನ.4 ರ ವರೆಗೆ ಬಿ.ಸಿ.ರೋಡಿನಲ್ಲಿ ತುಳು ನಾಟಕೋತ್ಸವ
ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇದರ ಬಂಟ್ವಾಳ ಘಟಕದ ವತಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ತುಳು ನಾಟಕೋತ್ಸವ” ಅ.29 ರಿಂದ ನ.4 ರ ವರೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಬಂಟ್ವಾಳ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧಾರೂಪದಲ್ಲಿ ನಡೆಯುವ ಈ ನಾಟಕೋತ್ಸವವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಲಿದ್ದು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅವರು ಅಧ್ಯಕ್ಷತೆ ವಹಿಸಲಿದ್ದು,ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪ್ರತಿದಿನ ಒರ್ವ ಕಲಾವಿದನನ್ನು ಗೌರವಿಸಲಾಗುವುದು ಎಂದರು.
ವಿಜೇತ ತಂಡ ಗಳಿಗೆ ಪ್ರಥಮ ,ದ್ವಿತೀಯ,ತೃತೀಯ ಹಾಗೂ ವಯಕ್ತಿಕ ಬಹುಮಾನ,ಪ್ರಶಸ್ತಿಪತ್ರ ನಗದನ್ನು ನೀಡಲಾಗುವುದು,7 ತಂಡಗಳ ಸುಮಾರು 100 ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಲಿದ್ದಾರೆ.ವೃತ್ತಿಪರ ನಾಟಕ ಕಲಾವಿದರಿಗೆ ಸ್ಪರ್ಧೆಯಲ್ಲಿ ಅವಕಾಶವಿರುವುದಿಲ್ಲ ಎಂದರು.
ತುಳು ನಾಟಕ ಕಲಾವಿದರ ಒಕ್ಕೂಟ
ಅವಿಭಜಿತ ದ. ಕ. ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತುಳು ನಾಟಕ ರಂಗದಲ್ಲಿ ದುಡಿಯುತ್ತಿರುವ ಮತ್ರು ಸೇವೆ ಮಾಡುತ್ತಿರುವ ಕಲಾವಿದರನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಮತ್ತು ಅವರ ಕಷ್ಟ,ನಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಯ 8 ತಾಲೂಕಿನಲ್ಲು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವ ಸಮಿತಿಯ ದಿವಾಕರದಾಸ್,ಗಜೇಂದ್ರ ಪ್ರಭು ಅವರು ಉಪಸ್ಥಿತರಿದ್ದರು.