ಬಂಟ್ವಾಳದಾದ್ಯಂತ ಕೋಟಿ ಕಂಠ ಗೀತ ಗಾಯನ
ಬಂಟ್ಚಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ‘ನನ್ನ ನಾಡು ನನ್ನ ಹಾಡು’ ಶೀರ್ಷಿಕೆಯಡಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಈ ಗೀತಗಾಯನದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ವಿಕಾಸ್ ಪುತ್ತೂರು , ಸದಾನಂದ ರಾಯಿ,ರವೀಂದ್ರ ಕಂಬಳಿ,ಕಮಲಾಕ್ಷಿ ಪೂಜಾರಿ,ಪುರುಷೋತ್ತಮ ಶೆಟ್ಟಿ, ರೋನಾಲ್ಡ್ ಡಿಸೋಜ,ಅರುಣ್ ರೋಶನ್ ಡಿಸೋಜ,ಕೇಶವ,ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು. ಗಾಯಕರಾದಬಾಸ್ಕರ್ ರಾವ್ ಹಾಗೂ ಶೈಲಜಾರಾಜೇಶ್ ಅವರ ತಂಡದಿಂದ ಗೀತಾಗಾಯನ ನಡೆಯಿತು.
ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಬಂಟ್ವಾಳ ಸಂಚಾಲಕ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು. ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಆಶೋಕ್ ಶೆಟ್ಟಿ ಸರಪಾಡಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಪುರಸಭೆಯಲ್ಲು ಗಾಯನ:
ಬಂಟ್ವಾಳ ಪುರಸಭಾ ಕಚೇರಿಯಲ್ಲು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಹಾಗೂ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಕೋಟಿ ಕಂಠಗಾಯನ ಹಾಡಿದರು.
ತಾಲೂಕು ಕಚೇರಿ,ತಾಪಂ.ನಲ್ಲು
ಆದೇರೀತಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಡಾ.ಸ್ಮಿತಾರಾಮು ಹಾಗೂ ತಾಪಂ.ನಲ್ಲಿ ಇ.ಒ.ರಾಜಣ್ಣ ಅವರ ನೇತೃತ್ವದಲ್ಲಿಸಿಬ್ಬಂದಿಗಳು ಕಚೇರಿಯಲ್ಲಿ ಕೋಟಿ ಕಂಠಗಾಯನ ಹಾಡಿದರೆ,ಬಂಟ್ವಾಳದಾದ್ಯಂತ ವಿವಿಧ ಶಾಲೆ,ಕಾಲೇಜುಗಳಲ್ಲಿಯು ನಿಗದಿತ ಸಮಯಕ್ಕೆ ಏಕಕಾಲದಲ್ಲಿ ಕೋಟಿಕಂಠ ಗಾಯನ ನಡೆಯಿತು.