ತಾಲೂಕು ಮಟ್ಟದ ಮುದ್ದು ಕಂದ ಫೋಟೋ ಸ್ಪರ್ಧೆ
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದ.ಕ.-ಉಡುಪಿ ಇದರ ಬಂಟ್ವಾಳ ವಲಯದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಮುದ್ದು ಕಂದ ಫೋಟೋ ಸ್ಪರ್ಧೆಯನ್ನು ಆಯೋಜಿಸಿದೆ.
ಎಸ್. ಕೆ. ಪಿ .ಎ ಸದಸ್ಯರು ಕ್ಲಿಕ್ಕಿಸಿದ ಫೋಟೋಗಳಿಗೆ ಮಾತ್ರ ಅವಕಾಶವಿದ್ದು, 3 ವರ್ಷದ ಒಳಗಿನ ಮಗುವಿನ 6×9 ಅಳತೆಯ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ಕಳುಹಿಸಬಹುದು. ಫೋಟೋದ ಹಿಂಬದಿಯಲ್ಲಿ ಮಗುವಿನ ಹೆಸರು ಮತ್ತು ಜನನ ಪ್ರಮಾಣ ಪತ್ರದ ಪ್ರತಿ ಹಾಗೂ ಛಾಯಾಯಾಗ್ರಾಹಕನ ಹೆಸರು, ಎಸ್ .ಕೆ .ಪಿ .ಎ ಸದಸ್ಯತನ ಸಂಖ್ಯೆ ನಮೂದಿಸಿರಬೇಕು.
ಮೊಬೈಲ್ ಫೋಟೋಗಳಿಗೆ ಅವಕಾಶವಿರುವುದಿಲ್ಲ. ಫೋಟೋ ಕಳುಹಿಸಲು ನವೆಂಬರ್ 10 ಕೊನೆಯ ದಿನವಾಗಿದೆ ಎಂದು ಎಸ್ ಕೆ ಪಿ ಎ.ಬಂಟ್ವಾಳ ವಲಯಾಧ್ಯಕ್ಷರಾದ ಹರೀಶ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್ ನನ್ನು ಸಂಪರ್ಕಿಸಬಹುದಾಗಿದೆ.