ಸಾಹಿತ್ಯ ಸಮ್ಮೇಳನ: ವಸ್ತು ಪ್ರದರ್ಶನಕ್ಕೆ ಅವಕಾಶ
ಬಂಟ್ವಾಳ: ನವಂಬರ್ 12 ಮತ್ತು 13 ರಂದು ಪೊಳಲಿ ಸಮೀಪದ ಅಮ್ಮುಂಜೆಯಲ್ಲಿ ಜರಗಲಿರುವ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲು ಆಸಕ್ತಿ ಇರುವ ಹವ್ಯಾಸಿ ವಸ್ತು ಸಂಗ್ರಹಕಾರರಿಗೆ ಸ್ಥಳಾವಕಾಶವನ್ನು ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಅಬೂಬಕರ್ ಅಮ್ಮುಂಜೆ (ದೂರವಾಣಿ ಸಂಖ್ಯೆ-9449386376) ಅಥವಾ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ (ದೂರವಾಣಿ ಸಂಖ್ಯೆ-9731437602) ಇವರನ್ನು ಸಂಪರ್ಕಿಸ ಬಹುದೆಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.