ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ
ಬಂಟ್ವಾಳ: ಬಂಟ್ವಾಳ: ಬಂಟ್ವಾಳದ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ ಕಾರ್ಯ ಭಾನುವಾರ ನಡೆಯಿತು.
ಎಸ್ ಆರ್ ಗ್ರೂಪ್ ಇದರ ಸಂಸ್ಥಾಪಕ ,ಶ್ರೀ ರಾಮ ಗೆಳೆಯರ ಬಳಗ ಇದರ ಅದ್ಯಕ್ಷ ಸದಾಶಿವ ಬಿಸಿರೋಡು ಇವರು ಶ್ರಮದಾನ ಮಾಡುವ ಮೂಲಕ ದೇವಳಕ್ಕೆ ಆಗಮಿಸಿದ ಭಕ್ತರೊಂದಿಗೆ ಪ್ರಾಂಗಣದ ನೆಲಹಾಲುಗಳನ್ನು ತೆಗೆಯುವ ಕೆಲಸ ಮಾಡಿದರು. ಶ್ರೀರಾಮ ಗೆಳೆಯರ ಬಳಗದ ಸದಸ್ಯರೊಂದಿಗೆ ವಿವಿಧ ಸಂಘಟನೆಗಳ ಸದಸ್ಯರು ಸಾಥ್ ನೀಡಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.