ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯೆ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ
ಬಂಟ್ವಾಳ: ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸೌಮ್ಯರವರನ್ನು ಸುಳ್ಳು ಭರವಸೆ ಹಾಗೂ ಅನೇಕ ರೀತಿಯ ಅಮಿಷಗಳನ್ನು ನೀಡಿ ಬಲವಂತದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು ಬಿಜೆಪಿ ಪಕ್ಷದ ಮುಖಂಡರು ಸೌಮ್ಯರವರಿಗೆ ಕೊಟ್ಟ ಅನೇಕ ಭರವಸೆಯನ್ನು ಈಡೇರಿಸದೆ ಇರುವುದರಿಂದ ಮನನೊಂದು ಹಾಗೂ ಪಕ್ಷದಲ್ಲಿ ಕಡೆಗಣಿಸಿರುವುದನ್ನು ಖಂಡಿಸಿ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಅಭಿವೃದ್ಧಿಯ ಹರಿಕಾರ ಮಾಜಿ ಸಚಿವ ಬಿ.ರಮಾನಾಥ ರೈಯವರ ವಿಶ್ವಾಸದ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್‌ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುವುದಾಗಿ ಘೋಷಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿ ದುಡಿದು ಪಕ್ಷದ ಯಶಸ್ಸಿನಲ್ಲಿ ಸಂಪೂರ್ಣ ತೋಡಗಿಸಿಕೊಳ್ಳುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮುಂಚೂಣಿ ಘಟಕದ ಅಧ್ಯಕ್ಷರಾದ ಜಗದೀಶ್‌ಕ್ಕೊಲ, ಮನೋಹರ್ ನೆರಂಬೋಳ್, ರಿಚಾರ್ಡ್ ಮಿನೇಜಸ್, ಸದಾನಂದ ಶೆಟ್ಟಿ, ಪ್ರವೀಣ್ ರೊಡ್ರಿಗಸ್, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೋರೆಟೊ, ಗಂಗಾದರ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶೆಣೈ, ಮಾಣಿಕ್ಯರಾಜ್ ಜೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿ ಮೋರಸ್, ಮುಖಂಡರಾದ ಉಮಾನಾಥ ಶೆಟ್ಟಿ, ವಿಶ್ವನಾಥಪೂಜಾರಿ, ಬಿ.ಆರ್‌ಅಂಚನ್, ಜಗನ್ನಾಥ ತುಂಬೆ, ವೆಂಕಪ್ಪಪೂಜಾರಿ, ಅಮ್ಮುಅರ್ಬಿಗುಡ್ಡೆ, ಪದ್ಮನಾಭ ಸಾಮಂತ್, ನಿತ್ಯಾನಂದ ಕಲಾಯಿ ಉಪಸ್ಥಿತರಿದ್ದರು.