ಮುಂಬಯಿ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಇದರ ೩೮ನೇ ವರ್ಷದ ಅಂಗವಾಗಿ ಹೊನಲು ಬೆಳಕಿನ ಸ್ವಸ್ತಿಕ್ ಪ್ರೋ ಕಬಡ್ಡಿ ಉತ್ಸವ-೨೦೨೨ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನ.೧೨ ರಂದು ಬೆಳಗ್ಗೆ ೯.೩೦ ರಿಂದ ನ.೧೩ರಂದು ರಾತ್ರಿ ೧೧.೩೦ರ ವರೆಗೆ ನಡೆಯಲಿದೆ.

ದ.ಕ ಜಿಲ್ಲಾ ಆಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುAಗಪ್ಪ ಬಂಗೇರ ಅವರ ನೇತೃತ್ವದಲ್ಲಿ, ಮುಂಬಯಿ ಉದ್ಯಮಿ ಸುಂದರ್‌ರಾಜ್ ಹೆಗ್ಡೆ ಅವರ ಸಾರಥ್ಯದಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ೬೦ ಕೆಜಿ ಮತ್ತು ಪುರುಷರ ಮುಕ್ತ ವಿಭಾಗ ಹಾಗೂ ದ. ಕ ಜಿಲ್ಲಾ ಮಟ್ಟದ ಪಿಯುಸಿ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

೬೦ ಕೆ.ಜಿ ವಿಭಾಗ ಮತ್ತು ಪುರುಷರ ಮುಕ್ತ ವಿಭಾಗ ಪ್ರವೇಶ ಶುಲ್ಕ ೧೦೦೦ ಹಾಗೂ ಪಿಯುಸಿ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗದ ಉಚಿತ ಪ್ರವೇಶ. ಪ್ರವೇಶ ಶುಲ್ಕದೊಂದಿಗೆ ತಂಡಗಳ ಹೆಸರನ್ನು ನ.೧೧ರ ಒಳಗೆ ನೊಂದಾಯಿಸಬೇಕು. ನ.೦೬ ರಂದು ಬೆಳಗ್ಗೆ ೧೦.೩೦ಕ್ಕೆ ಸ್ವಸ್ತಿಕ್ ಕಛೇರಿಯಲ್ಲಿ ತಂಡಗಳ ಮುಖಾಮುಖಿ ಚೀಟಿ ಎತ್ತಲಾಗುವುದು.

ವಿವಿಧ ವಿಭಾಗಗಳ ಬಹುಮಾನಗಳು:
ಪ್ರಥಮ ೩೦,೦೦೦ ನಗದು ಹಾಗೂ ಪ್ರಶಸ್ತಿ, ದ್ವಿತೀಯ ೨೦,೦೦೦ ನಗದು ಹಾಗೂ ಟ್ರೋಫಿ, ತೃತೀಯ ೭,೦೦೦ ನಗದು ಹಾಗೂ ಟ್ರೋಫಿ ಚತುರ್ಥ ೧,೦೦೦ ನಗದು ಹಾಗೂ ಟ್ರೋಫಿ. ಪುರುಷರ ಮುಕ್ತ ವಿಭಾಗ ಬಹುಮಾನಗಳು: ಪ್ರಥಮ ೧೫,೦೦೦ ನಗದು ಹಾಗೂ ಪ್ರಶಸ್ತಿ, ದ್ವಿತೀಯ ೧೦,೦೦೦ ನಗದು ಹಾಗೂ ಟ್ರೋಫಿ, ತೃತೀಯ ೭,೦೦೦ ನಗದು ಹಾಗೂ ಟ್ರೋಫಿ, ಚತುರ್ಥ ೪,೦೦೦ ನಗದು ಹಾಗೂ ಟ್ರೋಫಿ. ಪಿಯುಸಿ ಬಾಲಕ-ಬಾಲಕಿಯರ ವಿಭಾಗ ಬಹುಮಾನಗಳು: ಪ್ರಥಮ ೫,೦೦೦ ನಗದು ಹಾಗೂ ಪ್ರಶಸ್ತಿ, ದ್ವಿತೀಯ ೪,೦೦೦ ನಗದು ಹಾಗೂ ಟ್ರೋಫಿ, ದ್ವಿತೀಯ ೩,೦೦೦ ನಗದು ಹಾಗೂ ಟ್ರೋಫಿ, ತೃತೀಯ ೩,೦೦೦ ನಗದು ಹಾಗೂ ಟ್ರೋಫಿ, ಚತುರ್ಥ ೨,೦೦೦ ನಗದು ಹಾಗೂ ಟ್ರೋಫಿ. ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗ ಬಹುಮಾನಗಳು: ಪ್ರಥಮ ೫,೦೦೦ ನಗದು ಹಾಗೂ ಪ್ರಶಸ್ತಿ, ದ್ವಿತೀಯ ೩,೦೦೦ ನಗದು ಹಾಗೂ ಟ್ರೋಫಿ, ತೃತೀಯ ೨,೦೦೦ ನಗದು ಹಾಗೂ ಟ್ರೋಫಿ, ಚತುರ್ಥ ೧,೦೦೦ ನಗದು ಹಾಗೂ ಟ್ರೋಫಿ ಪ್ರದಾನಿಸಿಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಜೇಶ್.ಪಿ (೯೯೦೧೦೯೮೦೩೮), ಅಬ್ದುಲ್ ಹಮೀದ್ (೯೪೪೯೩೩೦೬೫೮), ಫ್ರಾನ್ಸಿಸ್.ವಿ.ವಿ (೯೪೪೯೩೩೨೨೮೩) ಇವರನ್ನು ಸಂಪರ್ಕಿಸಿ ತಂಡಗಳ ನೋಂದಣಿ ಮಾಡಿಕೊಳ್ಳುವಂತೆ ಸ್ವಸ್ತಿಕ್ ಫ್ರೆಂಡ್ಸ್ನ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *