ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜನಶ್ರೀ ವಿಮಾ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಮಂಜೂರಾದ ರೂ 3.5ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ ಮತ್ತು 300 ಕುಟುಂಬಗಳಿಗೆ ಕ್ಷೇಮಾ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಉದ್ಘಾಟಿಸಿದರು. ಕೆ.ಕೆ.ಪೂಂಜ, ಪ್ರಕಾಶ ಕಾರಂತ, ನಿಟ್ಟೆ ಕುಲಸಚಿವ ಪ್ರೊ.ಎಂ.ಎಸ್.ಮುಡಿತ್ತಾಯ, ಎಲ್ಲೈಸಿ ಪ್ರಬಂಧಕ ಶಂಕರ ವಿ.ಹೆಗ್ಡೆ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸಂಜೀವ ಪೂಜಾರಿ. ಬಿ.ಜಗನ್ನಾಥ ಚೌಟ ಮತ್ತಿತರರು ಇದ್ದರು.

