ನ.೨೦: ಗಲ್ಫ್ ನ ಯುಎಇಯಲ್ಲಿ ದುಬಾಯಿ ಗಡಿನಾಡು ಉತ್ಸವ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಮುಂಬಯಿ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕೇರಳ ಘಟಕ (ಕಾಸರಗೋಡು) ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕöÈತಿಕ ಅಕಾಡೆಮಿ (ರಿ.) ಕಾಸರಗೋಡು ಇದರ ಯುಎಇ ಘಟಕಗಳ ಸಂಯೋಜನೆಯಲ್ಲಿ ಗಲ್ಫ್ನಾಡು ದುಬಾಯಿಯಲ್ಲಿ ಇದೇ ಬರುವ ನ.೨೦ರ ಭಾನುವಾರ ಜರಗಲಿರುವ ದುಬಾಯಿ ಗಡಿನಾಡು ಉತ್ಸವ ಸಮಿತಿಗೆ ಪದಾಧಿಕಾರಿಗಳ ಭಾನುವಾರ ದುಬಾಯಿ ಅಲ್ಲಿನ ಕೆಎಂಸಿಸಿ ಸಭಾಗೃಹದಲ್ಲಿ ನಡೆಸಲ್ಪಟ್ಟಿತು. ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಕೋಶಾಧಿಕಾರಿ ಝೆಡ್.ಎ ಕಯ್ಯಾರ್ ಉಪಸ್ಥಿತರಿದ್ದು ಮಾಹಿತಿಪತ್ರ ಬಿಡುಗಡೆ ಗೊಳಿಸಿದರು.
![](https://www.suddi9.com/wp-content/uploads/2022/10/Dubai-Gadinaadu-Utsava-1-650x403.jpg)
೨೦೧೯ರ ಮಾರ್ಚ್ ನಲ್ಲಿ ನಡೆಸಲುದ್ದೇಶಿಸಿ ಕೊರೋನಾ ನಿಮಿತ್ತ ಮುಂದೂಡಿಸಲ್ಪಟ್ಟ ಬಾಯಿ ಗಡಿನಾಡು ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಗೌರವಾಧ್ಯಕ್ಷ ಆಗಿ ಅಮರದೀಪ ಕಲ್ಲೂರಾಯ, ಅಧ್ಯಕ್ಷ ಆಗಿ ನ್ಯಾಯವಾದಿ ಇಬ್ರಾಹಿಂ ಕಲೀಲ್ ಅರಿಮಲ, ಪ್ರಧಾನ ಸಂಚಾಲಕರಾಗಿ ಸದನ್ ದಾಸ್, ಸಂಯೋಜಕರಾಗಿ ಇಬ್ರಾಹಿಂ ಬೆರಿಕೆ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಕ್ಲಾಸಿಕ್, ಪ್ರಧಾನ ಕಾರ್ಯದರ್ಶಿ ಮುನೀರ್ ಕುಬಣೂರು, ಜಾಯ್ ಡಿಸೋಜಾ ಕಯ್ಯಾರ್, ಅಶ್ರಫ್ ಪಾವೂರು, ಮಂಜುನಾಥ್ ಕಾಸರಗೋಡು, ಅನೀಶ್ ಶೆಟ್ಟಿ, ಅಮಾನುಲ್ಲಾ ಮೀಂಜ, ಅಜೀಜ್ ಸಾಗ್, ಅಶ್ರಫ್ ಪಿ.ಪಿ ಬಾಯಾರ್ ಆಯ್ಕೆ ಮಾಡಲಾಗಿದೆ.
![](https://www.suddi9.com/wp-content/uploads/2022/10/Dubai-Gadinaadu-Utsava-2-650x458.jpg)
ಸಹ ಸಂಚಾಲಕರಾಗಿ ಕಾರ್ತಿಕ್ ವಾಮನ್ ರಾವ್, ಯೂಸುಫ್ ಶೇಣಿ, ಸಿದ್ದಿಕ್ ಕ್ಲಾಸಿಕ್, ಆಶಿಕ್ ಮಿಯಾ, ಮಧು, ಶಾಕಿರ್ ಬಾಯಾರ್, ಕೋಶಾಧಿಕಾರಿ ಇಬ್ರಾಹಿಂ ಬಾಜೂರಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ರಾಮಚಂದ್ರ ಬೆದ್ರಡ್ಕ, ಮಾಧ್ಯಮ ಸಂಯೋಜಕರಾಗಿ ಮುನೀರ್ ಬೇರಿಕೆ ಮತ್ತು ಝುಬೈರ್ ಕುಬಣೂರು ಆಯ್ಕೆಯಾಗಿದ್ದಾರೆ.
![](https://www.suddi9.com/wp-content/uploads/2022/10/Dubai-Gadinaadu-Utsava-4-650x395.jpg)
![](https://www.suddi9.com/wp-content/uploads/2022/10/Dubai-Gadinaadu-Utsava-5-650x390.jpg)
![](https://www.suddi9.com/wp-content/uploads/2022/10/IN-1-Dubai-Gadinaadu-Utsava-650x441.jpg)
![](https://www.suddi9.com/wp-content/uploads/2022/10/IN-2-Dubai-Gadinaadu-Utsava-650x441.jpg)