Published On: Tue, Oct 4th, 2022

ಸರ್ವ ಪ್ರಾಂತೀಯ ಸೇನೆಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಡಾ| ಶಿವ ಮೂಡಿಗೆರೆ ನೇಮಕ


ಮುಂಬಯಿ: ಸರ್ವ ಪ್ರಾಂತೀಯ ಸೇನೆಯ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಆಗಿ ಡಾ| ಶಿವ ಮೂಡಿಗೆರೆ ಅವರು ಆಯ್ಕೆಯಾಗಿದ್ದಾರೆ.

ಮುಂಬಯಿಯ ಯುವ ಉದ್ಯಮಿ ಮತ್ತು ನವಿ ಮುಂಬಯಿ ಹೋಟೆಲ್ ಓರ್ಸ್ ಅಸೋಸಿಯೇಶನ್‌ನ ಪ್ರಾದೇಶಿಕ ಉಪಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಇವರು ಸರ್ವ ಪ್ರಾಂತೀಯ ಸೇನೆಯ ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಆಗಿದ್ದು ಇದೀಗ ರಾಷ್ಟ್ರೀಯ ಅಧ್ಯಕ್ಷ ಮಹಾರಾಜ್ ರಾಜೀವ್ ಮಿಶ್ರಾ ಅವರು ಮಹಾರಾಷ್ಟç ರಾಜ್ಯಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಕೆ.ಕೆ.ಕುರಿಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಗೌತಮ್ ಜಿ. ಅವರು ಪದೋನ್ನತಿಯನ್ನು ಅಧಿಕೃತವಾಗಿ ಪ್ರಕಟಿಸಿ ಡಾ|ಶಿವ ಮೂಡಿಗೆರೆ ಅವರನ್ನು ಅಭಿನಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter