ಯಂಗ್ ಸ್ಟಾರ್ ಅಡ್ಯನಡ್ಕ ಬಳಗದಿಂದ ನಿರ್ಮಿಸಲಾದ ಶೌಚಾಲಯ ಕಟ್ಟಡ ಉದ್ಘಾಟನೆ
ಅಡ್ಯನಡ್ಕ: ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜನತಾ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ
ಆಶ್ರಯದಲ್ಲಿ ಅಕ್ಟೋಬರ್ 2ರಂದು ನಡೆದ ಮಹಾತ್ಮಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ
ವತಿಯಿಂದ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ನಿರ್ಮಿಸಿ ಕೊಡಲಾದ ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಲಾಯಿತು.
ಶಾಲಾ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ನೂತನ ಶೌಚಾಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಯಂಗ್ ಸ್ಟಾರ್
ಅಡ್ಯನಡ್ಕ ಬಳಗಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು.
ಕೇಪು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ ಸದಸ್ಯರೂ ಆಗಿರುವ ಅಬ್ದುಲ್ ಕರೀಮ್ ಕುದ್ದುಪದವು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ ಸದಸ್ಯರಾದ ಫೈಜಲ್, ಝಕ್ಕರಿಯ ಅಡ್ಯನಡ್ಕ, ಕರೀಮ್ ಬಿ.ಸಿ.ಸಿ., ಸಿದ್ದೀಕ್, ಅಝೀಝ್, ಮೊಯ್ದೀನ್, ಸಿಫಾನ್, ಶಾಫಿ ಅಡ್ಯನಡ್ಕ ಮತ್ತಿತರರು ಉಪಸ್ಥಿತರಿದ್ದರು. ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ ವತಿಯಿಂದ ಸಿಹಿತಿಂಡಿ ವಿತರಣೆ ಮತ್ತು ವಿದ್ಯಾರ್ಥಿಗಳಿಂದ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್, ಜನತಾ ಆಂಗ್ಲ ಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯಿನಿ ಯಶಸ್ವಿನಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಜನತಾ ಪದವಿಪೂರ್ವ
ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಮತ್ತಿತರ ಗಣ್ಯರು, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ಉಪಸ್ಥಿತರಿದ್ದರು. ಜನತಾ ಆಂಗ್ಲ
ಮಾಧ್ಯಮ ಶಾಲೆಯ ಸಹ ಶಿಕ್ಷಕ ಪ್ರಶಾಂತ ಮುಳಿಯ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.