ಬಿ.ಸಿ.ರೋಡ್: ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ. 6.62 ಲಕ್ಷ ರೂ.ಲಾಭ : ರಮಾನಾಥ ರೈ
ಬಂಟ್ವಾಳ: ತಾಲೂಕಿನ ಹೃದಯ ಭಾಗ ಬಿ.ಸಿ.ರೋಡ್ ನಲ್ಲಿ ಕಾರ್ಯಾಚರಿಸುತ್ತಿರುವ ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ .ನಿ ಬಿ .ಸಿ. ರೋಡ್ ಇದರ 2021-2022 ಸಾಲಿನ ವಾರ್ಷಿಕ ಮಹಾಸಭೆಯು ಹೋಟೆಲ್ ರಂಗೋಲಿ ಸಭಾಭಾವನದಲ್ಲಿ ಸೆ.24ರಂದು ನಡೆಯಿತು.

ಸೊಸೈಟಿಯ ಅಧ್ಯಕ್ಷರು, ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಆರ್ಥಿಕ ಸ್ವಾವಲಂಬನೆ ಜೊತೆಗೆ ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ಆರಂಭಗೊಂಡ ಬಂಟ್ವಾಳ ಕ್ರೆಡಿಟ್ ಸೊಸೈಟಿ ಕಳೆದ ಸಾಲಿನಲ್ಲಿ 10,89,52,648 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿ ರೂಪಾಯಿ 6,62,475 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು. ಮುಂದಿನ ವರ್ಷ ಬಂಟ್ವಾಳ ಲೊರೆಟ್ಟೋ ಪದವಿನಲ್ಲಿ ನೂತನ ಶಾಖೆ ಆರಂಭಿಸಲಾಗುವುದು ಎಂದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.ಶಾಖಾ ಅಧಿಕಾರಿ ಕಾವ್ಯಶ್ರೀ ಲೆಕ್ಕಪತ್ರ ವಾಚಿಸಿದರು. ನಿರ್ದೇಶಕ ನಾರಾಯಣ್ ನಾಯ್ಕ್ ಮುಂಗಡ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಮಾಯಿಲಪ್ಪ ಸಾಲಿಯಾನ್,ನಿರ್ದೇಶಕರಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್,ಪಿಯೂಸ್ ಎಲ್ ರೊಡ್ರಿಗಸ್, ಅಬ್ಬಾಸ್ ಆಲಿ, ಮಂಜುಳಾ ಪೆರಾಜೆ, ಅಲ್ಫೋನ್ಸ್ ಮೆನೇಜಸ್,ಅಮ್ಮು ಅರ್ಬಿ ಗುಡ್ಡೆ, ಸಿಬ್ಬಂದಿಯವರಾದ ಶೈಲೇಶ್ ಗೌಡ, ಮೆಲ್ವಿನ್ ಡಿ’ಸೋಜ, ರಂಜಿತಾ ನಾಯ್ಕ್ ಉಪಸ್ಥಿತರಿದ್ದರು. ನಿರ್ದೇಶಕರಾದ ಎಮ್ .ಎಸ್ ಮಹಮ್ಮದ್ ಸ್ವಾಗತಿಸಿದರು. ಸುದರ್ಶನ್ ಜೈನ್ ವಂದಿಸಿದರು. ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.



