ಪೊಳಲಿಯಲ್ಲಿ ಸೆ.26ರಂದು ರಾಷ್ಟ್ರಧರ್ಮ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.26ರಿಂದ ಅ.03ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.೨೬ರಂದು ಸೋಮವಾರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸಂಗಮದಲ್ಲಿ “ರಾಷ್ಟ್ರಧರ್ಮ” ರಾಷ್ಟ್ರಂ ಧಾರಯತಾಂ ಧ್ರುವಮ್ ದೇಶಭಕ್ತಿ ಸಂಸ್ಕೃತಿ ಚಿಂತನೆ.
ಪರಿಕಲ್ಪನೆ ಮತ್ತು ನಿರೂಪಣೆ: ಡಾ.ವಾದಿರಾಜ ಕಲ್ಲೂರಾಯ, ಕಲಾವಿದರು: ಕಿಶೋರ್ ಪೆರ್ಲ, ಶರತ್ ಹಳೆಯಂಗಡಿ, ಸುರೇಶ್ ಕಡಂದಲೆ, ಪ್ರಪುಲ್ಲಚಂದ್ರ ನೆಲ್ಯಾಡಿ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶಿತಿಕಂಠ ಭಟ್ ಉಜಿರೆ