Published On: Sat, Sep 24th, 2022

ಸೆ.26ರಿಂದ ಅ.03ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕೈಕಂಬ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.26ರಿಂದ ಅ.03ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿ ಪೂಜೆಯು ಪ್ರತಿನಿತ್ಯ ರಾತ್ರಿ 8.30 ಗಂಟೆಗೆ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಭಕ್ತಾಧಿಗಳಿಂದ ಹರಕೆಯ ಚಂಡಿಕಾ ಹೋಮವು ಹಾಗೂ ಅ.10ರಂದು ಸೋಮವಾರ ಮಹಾನವಮಿಯ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮ ನಡೆಯಲಿದೆ.

ಸೆ.26ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.೨೬ರಂದು ಸೋಮವಾರ ರಾಷ್ಟ್ರಧರ್ಮ,

ಸೆ.೨೭ರಂದು ಮಂಗಳವಾರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ರಾವಣ ವಧೆ,

ಸೆ.೨೮ರಂದು ಬುಧವಾರ ೬ರಿಂದ ೮ರವರೆಗೆ ಹರಿಕಥಾ ಕಾಲಕ್ಷೇಪ ಶ್ರೀ ದೇವಿ ಲಲಿತೋಪಖ್ಯಾನ ರಾತ್ರಿ ೦೮ರಿಂದ ೧೦ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ,

ಸೆ೨೯ರಂದು ಗುರುವಾರ ಸಂಜೆ ೦೬ರಿಂದ ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯ ಹಾಗೂ ಬಳಗದವರಿಂದ ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ದಾಸರಪದಗಳು.

ಸೆ.೩೦ರಂದು ಶುಕ್ರವಾರ ಸಂಜೆ ೦೬ರಿಂದ ನೃತ್ಯಾರ್ಪಣಂ, ರಾತ್ರಿ ೮ರಿಂದ ೧೦ರವರೆಗೆ ಸಂಗೀತ ನೃತ್ಯ ವೈಭವ,

ಅ.೦೧ರಂದು ಪೊಳಲಿ ಯಕ್ಷೋತ್ಸವ ೨೦೨೨ ಜಿಲ್ಲೆಯ ಪ್ರಸಿದ್ಥ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ಬಯಲಾಟ ದಕ್ಷಯಜ್ಞ ಮಾನಿಷಾದ

ಅ.೦೨ರಂದು ಸಂಜೆ ೦೬ರಿಂದ ೦೮ರವರೆಗೆ ಭರತನಾಟ್ಯ ರಾತ್ರಿ ೦೮ರಿಂದ ೧೦ರವರೆಗೆ ಸುಗಮ ಸಂಗೀತ, ದಾಸ ಕೀರ್ತನೆ ಭಕ್ತಿ ಗಾಯನ, ದೇವರ ನಾಮಗಳು

ಅ.೦೩ರಂದು ಸೋಮವಾರ ಸಂಜೆ ೦೬ರಿಂದ ನವರಾತ್ರಿ ವೇಷಗಳ ಸಂಭ್ರಮ.

ವಿಶೇಷ ಸೂಚನೆ:

1. ಶ್ರೀ ದೇವಿಗೆ ನಿತ್ಯ ಪೂಜೆ ರಾತ್ರಿ ಗಂಟೆ 7.00ಕ್ಕೆ ಹಾಗೂ ನವರಾತ್ರಿ ಪೂಜೆಯು ರಾತ್ರಿ ಗಂಟೆ 8.00ಕ್ಕೆ ನಡೆಯಲಿರುವುದು.

2. ಸೆ.30ರಂದು ಶುಕ್ರವಾರ ಲಲಿತಾ ಪಂಚಮಿಯಂದು ಬೆಳಗ್ಗೆ ಗಂಟೆ 9.00 ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವುದು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter