ಮೂಡಬಿದ್ರೆ; ದ.ಕ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆ ಮೂಡಬಿದ್ರೆಯಲ್ಲಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ನಿನ್ನೆ ನಡೆದಿದೆ. ಕಂಬಳ ನಿಷೇದದ ವಿಚಾರದಲ್ಲಿ ಕರೆದಿದ್ದ ತುರ್ತು  ಸಭೆಯಲ್ಲಿ ಮೂಡಬಿದ್ರೆಯ ಕಡಲಕೆರೆ ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಅಭಯ ಚಂದ್ರ ಜೈನ್ ಕಂಬಳ ಸಮಿತಿಗೆ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಮಾತನಾಡಿದ ಜೈನ್ ಸರಕಾರ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿದೆ. ರಾಜ್ಯ ಸರಕಾರ ಕಂಬಳ ನಿಷೇದಿಸಿಲ್ಲ, ಸುಪ್ರೀ ಕೋರ್ಟ್  ತೀರ್ಪಿನ ಆದಾರದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಬಗ್ಗೆ ತಾನು ಕಾನೂನು ಸಚಿವರ ಅಭಿಪ್ರಾಯ ಪಡೆದು, ಕೇಂದ್ರ ಸಚಿವರ ಜೊತೆಯೂ ಚರ್ಚಿಸುವುದಾಗಿ ತಿಳಿಸಿದ್ದಾರೆ jain ಕೇರಳದ ಜಲ್ಲಿಕಟ್ಟು ನಿಷೇದವನ್ನು ಮಾಡಿದ ಮಾತ್ರಕ್ಕೆ ಆ ತೀರ್ಪು  ಕಂಬಳಕ್ಕೆ ಅನ್ವಯವಾಗುವುದಿಲ್ಲ. ಕಂಬಳ ಕ್ರೀಡೆ ಜಾನಪದ ಮತ್ತು ಇತಿಹಾಸವುಳ್ಳ ಕ್ರೀಡೆ. ಸುಪ್ರೀಂ ತೀರ್ಪನ್ನು ತಪ್ಪಾಗಿ ಅರ್ಥೆಯಿ ಸಲಾಗಿದೆ. ಸರಕಾರ ಯಾವುದೇ ಕಾರಣಕ್ಕೂ ಕಂಬಳ ನಿಷೇದಿಸಬಾರದು ಎಂದು ಸಮಿತಿ ಸಚಿವರಲ್ಲಿ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *