ಮೂಡುಬಿದರೆ: ಜೈಲ್ನಲ್ಲಿ ಸ್ನೇಹಿತರಾದ ಕ್ರಿಮಿನಲ್ಗಳು ಮೂಡಬಿದ್ರೆ ಮತ್ತು ಬಜ್ಪೆ ಪರಿಸರದಲ್ಲಿ ಹಲವು ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ, ಪೊಲೀಸರು ವಾಹನ ತಪಾಸಣೆ ವೇಳೆ ಸೆರೆಯಾದ ಮೂವರು ಕಳ್ಳರಿಗೆ ಮೂಡಬಿದರೆ ಜೆಎಮ್ಫ್ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಎಡಪದವು ಪಾಡಿಯಾರು ದಖರ್ಾಸು ಮನೆಯ ಚಿದಾನಂದ ಗೌಡ(26), ಎಡಪದವು ತರೋಳಿಕಾಡು ನಿವಾಸಿ ರಜನೀಶ(20) ಮತ್ತು ಎಡಪದವು ಗ್ಯಾರೇಜಿನ ವೆಲ್ಡರ್ ಮೂಲತ ಮಡಿಕೇರಿಯವನಾಗಿರುವ ಮಿಥುನ್(24) ಹಲವು ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು, ಪೋಲಿಸರು ಬಂದಿಸಿದ್ದರು. ಈ ಮೂವರು ಆರೋಪಿಗಳ ಪರ ವಕೀಲ ನಾಗೇಶ್ ಶೆಟ್ಟಿ ಡಿ ಜಾಮೀನು ವಾದಿಸಿದ್ದರು.


ಆರೋಪಿಗಳು ಕಲ್ಲಮುಂಡ್ಕೂರಿನ ಒಳರಸ್ತೆಯಲ್ಲಿ ರಾತ್ರಿ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಚಾಕು ತೋರಿಸಿ ಗುಂಡ್ಯಡ್ಕದ ಬೀನಾ ಮಿಸ್ಕಿತ್ ಎಂಬ ಯುವತಿಯ ಚಿನ್ನದ ಸರ ಮತ್ತು ಉಂಗುರ ಕಸಿದು ಪರಾರಿಯಾಗಿದ್ದರು. ಬಳಿಕ ಕಳೆದ ಬಾರಿಯ ಆಳ್ವಾಸ್ ವಿಶ್ವನುಡಿಸಿರಿ ವೇಳೆ ರಾತ್ರಿ ವಿದ್ಯಾಗಿರಿ ಆವರಣದಲ್ಲಿ ನಿಲ್ಲಿಸಿದ್ದ ಬಂಟ್ವಾಳ ಮುಡಾಯಿಕೋಡಿ ಮೂಸಾ ಫಯಾಸ್ ಎಂಬವರ ಬೈಕ್ನ್ನು ಚಿದಾನಂದ ಮತ್ತು ಮಿಥುನ್ ಕಳವುಗೈದಿದ್ದರು. ಬಳಿಕ ಗಂಜಿಮಠದಲ್ಲಿ ರೊನಾಲ್ಡ್ ಗಾಡ್ವಿನ್ ಪೆನರ್ಾಂಡೀಸ್ ರವರ ಮನೆಯಲ್ಲಿ ನಡೆದ ಚಿನ್ನಾಭರಣ, ಡಿವಿಡಿ ಪ್ಲೇಯರ್ ಹಾಗೂ ನಗದು ಸೇರಿದಂತೆ ಸುಮಾರು 1 ಲಕ್ಷ ಮೌಲ್ಯದ ಸೊತ್ತುಗಳ ಕಳವು ಪ್ರಕರಣ, ಮುಚ್ಚುರು ಕೊಂಪದವು ಸೀಮಾ ಪೆನರ್ಾಂಡೀಸ್ ಅವರ ಮನೆಯಲ್ಲಿ ನಡೆದ ಟಿ.ವಿ, ಇನ್ನಿತರ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಕಳ್ಳತನ ಹಾಗೂ ಎಡಪದವು ಶಿಬ್ರಿಕೆರೆ ಸುಬ್ರಾಯ ಕಾರಂತರ ಮನೆಯಿಂದ ಟಿ.ವಿ, ಹಿತ್ತಾಳೆ ಚೆಂಬು ಹಾಗೂ 6 ಸಾವಿರ ನಗದು ಕಳ್ಳತನದಲ್ಲಿ ಚಿದಾನಂದ ಮತ್ತು ಮಿಥುನ್ ಆರೋಪಿಗಳಾಗಿದ್ದಾರೆ.
ಚೈನ್ ಎಗರಿಸಿದ ಪ್ರಕರಣ ಬಿಟ್ಟರೆ ಉಳಿದ ಕೃತ್ಯಗಳಲ್ಲಿ ರಜನೀಶ್ ಭಾಗಿಯಾಗಿರದ ಕಾರಣ ಆತ ಬಿಡುಗಡೆಗೊಂಡಿದ್ದಾನೆ. ಚಿದಾನಂದ ಗೌಡ ಮತ್ತು ಮಿಥುನ್ ಉಳಿದ ಪ್ರಕರಣದಲ್ಲಿ ಭಾಗಿಯಾಗಿದ್ದು, ಆ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಬಾಕಿ ಇರುವ ಹಿನ್ನಲೆಯಲ್ಲಿ ಬಿಡುಗಡೆಗೊಂಡಿಲ್ಲ.
