ಮೂಡುಬಿದಿರೆ, ವಿದ್ಯಾಗಿರಿ, (ಬಿ.ಎಂ. ಇದಿನಬ್ಬ ವೇದಿಕೆ, ಅಹ್ಮದ್ ನೂರಿ ಸಭಾಂಗಣ), ನ.16: ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಏರಿಸಿದ ಡಾ. ಮೋಹನ್ ಆಳ್ವರು ತನ್ನ 11ನೆ ಆಳ್ವಾಸ್ ನುಡಿಸಿರಿಯಲ್ಲಿ ಬ್ಯಾರಿ ಭಾಷಿಗರಿಗೂ ಅವಕಾಶ ಮಾಡಿಕೊಡುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ. ಇದರಿಂದ ಬ್ಯಾರಿಗಳಿಗೆ ಅಕಾಡಮಿ ಸಿಕ್ಕಿದ್ದಷ್ಟೇ ಸಂತಸ ಈಗ ಆಗಿದೆ. ಇತರ ಸಮುದಾಯ, ಭಾಷಿಗರನ್ನು ಹೇಗೆ ಗೌರವಿಸಬೇಕು ಎಂದು ತೋರಿಸಿಕೊಟ್ಟ ಆಳ್ವರಿಂದಾಗಿ ಬ್ಯಾರಿ ಚಳವಳಿಗೆ ಹೊಸ ಶಕ್ತಿ ಸಿಕ್ಕಂತಾಗಿದೆ. ಹಾಗಾಗಿ ಪ್ರತಿಯೊಬ್ಬ ಬ್ಯಾರಿಗಳಲ್ಲೂ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಉಸಿರಾಗಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾನ ಸಚಿವ ಯು.ಟಿ.ಖಾದರ್ ಹೇಳಿದರು.
Byari Siri (1)

Byari Siri (2)

Byari Siri (3)

Byari Siri (4)

Byari Siri (5)

Byari Siri (6)

Byari Siri (7)

Byari Siri (8)

Byari Siri (9)

Byari Siri (10)

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ 2014ರಲ್ಲಿ ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಹಕಾರದೊಂದಿಗೆ ರವಿವಾರ ಜರಗಿದ “ಬ್ಯಾರಿ ಭಾಷಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ-ಆಳ್ವಾಸ್ ಬ್ಯಾರಿ ಭಾಷಾ ಸಿರಿ” ಕಾರ್ಯಕ್ರಮವನ್ನು ಮೂರು ತೆಂಗಿನ ಸಸಿಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ಕನರ್ಾಟಕದ ಎಲ್ಲಾ ಭಾಷಿಗರ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಆ ಮೂಲಕ ಪ್ರಾದೇಶಿಕ ಭಾಷಿಗರ ಮಧ್ಯೆ ಮತ್ತಷ್ಟು ಅನ್ಯೋನ್ನತೆ ಸಾಧಿಸಬಹುದು ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ವಹಿಸಿದ್ದರು. ಶಾಸಕ ಬಿ.ಎ.ಮೊಯ್ದಿನ್ ಬಾವಾ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಶುಭ ಹಾರೈಸಿದರು. ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿಯ ರುವಾರಿ ಡಾ.ಮೋಹನ್ ಆಳ್ವರನ್ನು ಅಕಾಡಮಿಯ ಪರವಾಗಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನುಡಿಸಿರಿಯ ಸವರ್ಾಧ್ಯಕ್ಷ ನಾಡೋಜ ಡಾ. ಸಿದ್ದಲಿಂಗಯ್ಯ, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾಣರ್ಿಕ್, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಟಿಆರ್ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಭಾರತೀಯ ಕೃಷಿಕ ಸಮಾಜದದ ದ.ಕ.ಜಿಲ್ಲಾಧ್ಯಕ್ಷ ಹಾಜಿ ಹೈದರ್ ಪತರ್ಿಪ್ಪಾಡಿ, ನಿವೃತ್ತ ಕಂದಾಯ ನಿರೀಕ್ಷಕ ಮೂಸಬ್ಬ ಜೋಕಟ್ಟೆ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಜಿಲ್ಲಾ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಆಯಿಶಾ ಎ.ಎ.ಪೆರ್ಲ, ಅಬ್ಬಾಸ್ ಕಿರಗುಂದ, ಅಲಿಯಬ್ಬ ಜೋಕಟ್ಟೆ, ಯೂಸುಫ್ ವಕ್ತಾರ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಹಾಜಿ ಅಬ್ದುಲ್ ಅಝೀಝ್ ಬೈಕಂಪಾಡಿ, ಅಝೀಝ್ ಹಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಗಾಯಕ ಶರೀಫ್ ನಿಮರ್ುಂಜೆ ಧ್ಯೇಯಗೀತೆ ಹಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ವಂದಿಸಿದರು. ಅಕಾಡಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ ಮಾಡಬಹುದು
* ಬ್ಯಾರಿ ಸಮುದಾಯವನ್ನು ಕಡೆಗಣಿಸುವಂತಿಲ್ಲ : ಜಿಲ್ಲೆಯ ಮಣ್ಣಿನ ಮಕ್ಕಳಾದ ಬ್ಯಾರಿಗಳು ವಿವಿಧ ಕ್ಷೇತ್ರಗಳಲ್ಲೂ ತನ್ನ ಅಸ್ತಿತ್ವವನ್ನು ತೋರಿಸುತ್ತಿದ್ದಾರೆ. ಜಗತ್ತಿನಲ್ಲಿ ಒಟ್ಟು 18 ಲಕ್ಷದಷ್ಟು ಬ್ಯಾರಿಗಳಿದ್ದು, ಆ ಪೈಕಿ ಜಿಲ್ಲೆಯಲ್ಲೇ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಜಿಲ್ಲೆಯ ಮುಸ್ಲಿಮರ ಪೈಕಿ ಶೇ.90ರಷ್ಟು ಬ್ಯಾರಿಗಳಿರುವುದು ಗಮನಾರ್ಹ. ಹಾಗಾಗಿ ಯಾವ ಕಾರಣಕ್ಕೂ ಬ್ಯಾರಿ ಸಮುದಾಯವನ್ನು ಕಡೆಗಣಿಸುವಂತಿಲ್ಲ ಎಂದು ಪ್ರಧಾನ ಭಾಷಣಗೈದ ಉದ್ಯಮಿ ಉಮರ್ ಟೀಕೆ ಹೇಳಿದರು.
ಜಿಲ್ಲೆಯಲ್ಲಿ 125 ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ಬ್ಯಾರಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಣ್ಣ ಸಣ್ಣ ವ್ಯಾಪಾರ ಮಾಡುತ್ತಿದ್ದವರು ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಸೌಹಾರ್ದದ ತಾಣವಾಗಿದ್ದ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕ್ಷುಲ್ಲಕ ಕಾರಣಕ್ಕಾಗಿ ಅಸಮಾಧಾನದ ಹೊಗೆ ಏಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದಕ್ಕೆ ತಡೆಯೊಡ್ಡುವ ಕುರಿತು ಇಂತಹ ಸಮ್ಮೇಳನಗಳು ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಉಮರ್ ಟೀಕೆ ತಿಳಿಸಿದರು.
ಬ್ಯಾರಿಗಳಿಗೆ ಇಸ್ಲಾಮಿನ ಚೌಕಟ್ಟಿನಿಂದ ಹೇಗೆ ಹೊರಗಿರಲು ಸಾಧ್ಯವಿಲ್ಲವೋ ಹಾಗೇ ದೇಶದ ಗಣತಂತ್ರ ವ್ಯವಸ್ಥೆಯಿಂದಲೂ ಹೊರಗೆ ಇರಲು ಸಾಧ್ಯವಿಲ್ಲ. ಇದನ್ನು ಮನಗಂಡು ಯಾವುದೇ ಸಮುದಾಯಕ್ಕೂ ಧಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಬ್ಯಾರಿಗಳ ಮೇಲೆ ಇದೆ ಎಂದು ಉಮರ್ ಟೀಕೆ ಹೇಳಿದರು.

* ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬ್ಯಾರಿ ಮಹನೀಯರಾದ ಹರೇಕಳ ಹಾಜಬ್ಬ, ಹಸನಬ್ಬ ಚಾಮರ್ಾಡಿ, ಖಾಲಿದ್ ತಣ್ಣೀರುಬಾವಿ, ರಹೀಂ ಬಿ.ಸಿ.ರೋಡ್, ಪ್ರೊ.ಬಿ.ಎಂ.ಇಚ್ಲಂಗೋಡು, ಫಕ್ರುದ್ದೀನ್ ಇರುವೈಲು, ಇಬ್ರಾಹಿಂ ತಣ್ಣೀರುಬಾವಿ, ಡಾ. ಗಡರ್ಾಡಿ ಪಡ್ಡಂದಡ್ಕ, ಜಮಾಲುದ್ದೀನ್ ಮೂಡುಬಿದಿರೆ ಹಾಗು ಸಾಧಕ ಸಂಸ್ಥೆಗಳಾದ ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಪರವಾಗಿ ಮೂಡುಬಿದಿರೆ ವಲಯಾಧ್ಯಕ್ಷ ಎಂ.ಎಚ್.ಶರೀಫ್ ಹಾಗು ಟ್ಯಾಲೆಂಟ್ ರಿಸಚರ್್ ಫೌಂಡೇಶನ್ ಪರವಾಗಿ ಅಧ್ಯಕ್ಷ ರಿಯಾಝ್ ಕಣ್ಣೂರ್ರನ್ನು ಸನ್ಮಾನಿಸಲಾಯಿತು.

* ಸಾಂಸ್ಕೃತಿಕ ಕಾರ್ಯಕ್ರಮ : ಇಸ್ಮಾಯೀಲ್ ಮೂಡುಶೆಡ್ಡೆ ರಚಿಸಿ, ನಿದರ್ೇಶಿಸಿದ ಹಾಸ್ಯ ನಾಟಕ “ಕಾಸಿಮಾಕರೊ ಪಿತ್ತ್ಲ್” ಹಾಗು ಕೊಳ್ನಾಡು ಮತ್ತು ಬಿ.ಸಿ.ರೋಡ್ ತಂಡದಿಂದ ದಪ್ಪು ಪ್ರದರ್ಶನಗೊಂಡಿತು. ಎಡಪದವು ಐಡಿಯಲ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಭಾಷಾ ಹಾಡು ಮತ್ತು ಖವ್ವಾಲಿ ಕಾರ್ಯಕ್ರಮ, ಅಝೀಝ್ ಬೈಕಂಪಾಡಿ ಮತ್ತು ತಂಡದಿಂದ ತೇನ್ಕಿನ್ಯ ಸಂಗೀತ ನಾಟಕ ಪ್ರದರ್ಶನಗೊಂಡಿತು. ಸಮದ್ ಕಾಟಿಪಳ್ಳ ಬ್ಯಾರಿ ಚುಟುಕುಗಳು, ಎಂ.ಜಿ. ರಹೀಂ ತಂಡದಿಂದ ಕೋಲ್ಕಲಿ, ಕಲ್ಲಡ್ಕ ತಂಡದಂದ ಒಪ್ಪಣೆ ಹಾಡು ಹಾಗು ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಮುಹಮ್ಮದ್ ಶರೀಫ್ ನಿಮರ್ುಂಜೆ, ರಹೀಂ ಬಿ.ಸಿ.ರೋಡ್, ಹುಸೈನ್ ಕಾಟಿಪಳ್ಳ, ಖಾಲಿದ್ ತಣ್ಣೀರುಬಾವಿ, ಸಮದ್ ಕಾಟಿಪಳ್ಳ, ಶೌಕತ್ ಪಡುಬಿದ್ರೆ, ಅಶ್ರಫ್ ಅಪೋಲೋ ಕಲ್ಲಡ್ಕ, ಶಮೀರ್ ಮೂಲ್ಕಿ,ಸುಹೈಲ್ ಬಡ್ಡೂರು, ಮಲ್ಲಿಕಾ, ನಯನಾ ಬ್ಯಾರಿ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸಿದರು.
………..
ವಿಶೇಷ ಆಕರ್ಷಣೆಗಳು
*ಸಚಿವರಿಂದ ನೀರು ಎರೆಯಲ್ಪಟ್ಟ ಮೂರು ಸಸಿಗಳನ್ನು ಕ್ರಮವಾಗಿ ಎನ್.ಜೆ. ಫೆನರ್ಾಂಡೀಸ್, ಆದಿರಾಜ್, ಸಲೀಂ ಹಂಡೇಲು ಪಡೆದುಕೊಂಡರು.
*ಡಾ. ವಹಾಬ್ ದೊಡ್ಡಮನೆ ದ್ವಾರದಿಂದ ಆಕರ್ಷಕ ದಫ್ ಮೆರವಣಿಗೆ.
*ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಭಾಷಾ ಪುಸ್ತಕ ಪ್ರದರ್ಶನ ಮತ್ತು ಮಾರಾಟ.
*ಎಂ.ಜಿ.ರಹೀಂ ನೇತೃತ್ವದಲ್ಲಿ ಬ್ಯಾರಿ ಭಾಷೆಯ ವಿವಿಧ ಕ್ಯಾಸೆಟ್, ಸಿ.ಡಿ.ಗಳ ಪ್ರದರ್ಶನ ಮತ್ತು ಮಾರಾಟ.
*ಎಂ.ಜಿ.ರಹೀಂ ನೇತೃತ್ವದಲ್ಲಿ ಬ್ಯಾರಿ ಜನಾಂಗದ ಛಾಯಾಚಿತ್ರ ಪ್ರದರ್ಶನ.
*ಹುಸೈನ್ ಕಾಟಿಪಳ್ಳ ನೇತೃತ್ವದಲ್ಲಿ ಬ್ಯಾರಿ ಭಾಷಾ ಪತ್ರಿಕೆಗಳ ಪ್ರದರ್ಶನ.
*ಅಬ್ದುಲ್ ಅಝೀಝ್ ಬೈಕಂಪಾಡಿ ಮತ್ತು ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ ನೇತೃತ್ವದಲ್ಲಿ ಬ್ಯಾರಿ ಜನಾಂಗದ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ.
….

By suddi9

Leave a Reply

Your email address will not be published. Required fields are marked *