ಮೂಡುಬಿದರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2014 ಇದರ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಮೂಡುಬಿದರೆ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಮೂಡುಬಿದರೆ ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಡೆಯಿತು.

* ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.

mbd_nov17_3 (2)

 

 


* ಮೂಡುಬಿದರೆಯಲ್ಲಿ ಪುಸ್ತಕ ಜ್ಞಾನದ ಜ್ಯೋತಿಯೆಡೆಗೆ ನಮ್ಮ ನಡಿಗೆ ಜಾಥ ನಡೆಯಿತು.mbd_nov17_3 (1)

ಯುವಜನ ಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜಕ್ಕೆ ಜ್ಞಾನವನ್ನು ಕೊಡುವಂತಹ ಕೆಲಸವನ್ನು ಗ್ರಂಥಾಲಯಗಳು ಮಾಡುತ್ತಿವೆ. ಕೇವಲ ಪೇಪರನ್ನು ಓದಿದರೆ ಮಾತ್ರ ಜ್ಞಾನ ವೃದ್ಧಿಯಾಗದು ಬದಲಾಗಿ ಪುಸ್ತಕಗಳನ್ನು ಓದಿ ವಿಷಯಗಳನ್ನು ಮೆಲುಕು ಹಾಕಿಕೊಂಡಾಗ ಮಾತ್ರ ತಿಳುವಳಿಕೆ ಸಿಗಲು ಸಾಧ್ಯ ಎಂದು ಹೇಳಿದರು.

ಪುರಸ್ಕಾರ ಪ್ರದಾನ: ಗ್ರಂಥಾಲಯ ಇಲಾಖೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ಗ್ರಂಥಾಲಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಸವಿತಾ, ಶಿತರ್ಾಡಿ ಗ್ರಂಥಾಲಯದ ಮೇಲ್ವೀಚಾರಕ ಜಗದೀಶ ಭಟ್, ಸವಣೂರಿನ ಕು.ಶಾರಾದಾ, ಧರ್ಮಸ್ಥಳದ ಮಂಜುಳಾ, ನರಿಂಗಾನದ ಆಶಾ, ಪೆರಾಬೆಯ ಜಯಕುಮಾರಿ, ಬೆಳ್ಳಾರೆಯ ಶಶಿಕಲಾ ಮತ್ತು ಸುಬ್ರಹ್ಮಣ್ಯದ ಲಲಿತಾ ಅವರಿಗೆ ಸಚಿವರು ಸೇವಾ ಪುರಸ್ಕಾರವನ್ನು ಪ್ರದಾನ ಮಾಡಿದರು.

ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆ, ಸಾಹಿತಿ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಬಿ.ಎಂ. ರೋಹಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಪ್ತಾಹದಂಗವಾಗಿ ಗ್ರಂಥಾಲಯ ಶಾಲಾ ವಿದ್ಯಾಥಿಗಳಿಗೆ ಏರ್ಪಡಿಸಿದ್ದ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ವೆಂಕಟೇಶ ಸಿ.ಜೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೂಡುಬಿದರೆ ಶಾಖಾ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಪ್ರನಿತಾ ಪ್ರಿಯ ಮೊಂತೇರೋಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು `ಪುಸ್ತಕ ಜ್ಞಾನದ ಜ್ಯೋತಿಯೆಡೆಗೆ ನಮ್ಮ ನಡಿಗೆ’ ಎಂಬ ಘೋಷಣೆಯೊಂದಿಗೆ ಮೂಡುಬಿದರೆ ಗ್ರಂಥಾಲಯದಿಂದ ಹನುಮಂತ ದೇವಾಸ್ಥಾನದ ಮೂಲಕ ಸಾಗಿ ಸ್ವರ್ಣ ಮಂದಿರದವರೆಗೆ ಜಾಥಾ ನಡೆಯಿತು.

 

By suddi9

Leave a Reply

Your email address will not be published. Required fields are marked *