ಪಡುಪೆರಾರ: ಬಂಟಕಂಬ ರಾಜಾಗಂಣ ಜೀರ್ಣೋದ್ದಾರ ಸಮಾಲೋಚನಾ ಸಭೆ
ಕೈಕಂಬ : ಶ್ರೀ ಬ್ರಹ್ಮದೇವರು ಬಲoವಾಡಿ. ವ್ಯಾಘ್ರ ಚಾಮುಂಡಿ ದೈವಸ್ಥಾನ ಪಡುಪೆರಾರ ಇದರ ಬಂಟಕಂಬ ರಾಜಾoಗಣದ ಜೀರ್ಣೋದ್ದಾರ ಕೆಲಸ ಕಾರ್ಯಗಳ ಪ್ರಗತಿಯ ಕುರಿತಂತೆ ಭಕ್ತಾಭಿಮಾನಿಗಳ ಸಭೆಯು ಸೆ.18ರಂದು ಭಾನುವಾರ ಕ್ಷೇತ್ರದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಆಡಳಿತಾಧಿಕಾರಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಗಳೂ ಆಗಿರುವ ಸಾಯಿಷ್ ಚೌಟ ಕ್ಷೇತ್ರದ ಪರಂಪರೆ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಬಂಟಕಂಬದ ಜೀರ್ಣೋದ್ದಾರದ ಕಾರ್ಯ ನಡೆಯುತ್ತಿದ್ದು ಊರ ಮತ್ತು ಪರವೂರ ಭಕ್ತರು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ.
ಶಾಸಕ ಭರತ್ ಶೆಟ್ಟಿ ಅವರ ಅಧ್ಯಕ್ಷತೆಯ ಜೀರ್ಣೋದ್ದಾರ ಸಮಿತಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಭಕ್ತರ ಸಹಕಾರದಿಂದ ನಿಗದಿತ ವೇಳೆಗೆ ಜೀರ್ಣೋದ್ದಾರ ಕಾರ್ಯ ಸಂಪೂರ್ಣವಾಗಬೇಕಿದೆ. ಸಾಧ್ಯವಾದಷ್ಟು ಅನುದಾನವನ್ನು ಸರಕಾರದಿಂದ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸುತ್ತಿದ್ದಾರೆ ಸರಕಾರದಿಂದ ಅನುದಾನ ದೊರೆಯುವ ವಿಶ್ವಾಸವಿದೆ ಜತೆಗೆ ಭಕ್ತರ ಉದಾರ ಸಹಾಯದ ಅಗತ್ಯವೂ ಇದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು ಮಾತನಾಡಿ ಜೀರ್ಣೋದ್ದಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಾಗದಂತೆ ಭಕ್ತರ ಉದಾರ ಮನಸ್ಸಿನ ಧನಸಹಾಯದ ಅವಶ್ಯಕತೆ ಇದೆ. ಈ ಮೂಲಕ ಎಲ್ಲರೂ ಈ ಪುಣ್ಯಕಾರ್ಯದಲ್ಲಿ ಭಾಗೀಗಳಾಗಬೇಕು ಎಂದರು.
ಸಮಿತಿಯ ಉಪಾಧ್ಯಕ್ಷ, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ಸಭೆಯಲ್ಲಿ ಮಾತನಾಡಿದರು. ಮುಂಡಬೆಟ್ಟು ಗುತ್ತು ರಂಗನಾಥ ಭಂಡಾರಿಯವರು ಇದುವರೆಗಿನ ಲೆಕ್ಕಪತ್ರಗಳ ವಿವರಗಳನ್ನು ಸಭೆಯ ಮುಂದಿಟ್ಟರು.
ಕ್ಷೇತ್ರದ ಮಧ್ಯಸ್ಥರಾದ ಬ್ರಾಣಬೆಟ್ಟು ಗುತ್ತು ಪ್ರತಾಪ್ ಚಂದ್ರ ಶೆಟ್ಟಿ, ಪ್ರಮುಖರುಗಳಾದ ಮೋನಪ್ಪ ಪೂಜಾರಿ, ಪ್ರತ್ಯುಷ್ ಮಲ್ಲಿ ಬ್ರಾಣ ಬೆಟ್ಟು, ಹರೀಶ್ ಶೆಟ್ಟಿ ನಡಿಗುತ್ತು, ಮೋಹನ್ ಪೂಜಾರಿ ಕಬೇತ್ತಿಗುತ್ತು, ಕರುಣಾಕರ ಆಳ್ವ, ಓಂಪ್ರಸಾದ್ ರೈ,ವಾಸು ಶೆಟ್ಟಿ, ಶೇಖರ ಸಫಲಿಗ, ಜೀರ್ಣೋದ್ದಾರ ಸಮಿತಿಯ ಸದಸ್ಯರುಗಳಾದ ವಿದ್ಯಾ ಜೋಗಿ, ಅರುಣ್ ಕೋಟ್ಯಾನ್, ರಮೇಶ್ ಅಂಚನ್ ಮತ್ತು ಭಕ್ತಾದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುರೇಶ್ ಅಂಚನ್ ಮೂಡುಪೆರಾರ ನಿರೂಪಿಸಿ, ವಂದಿಸಿದರು.