ಮೂಡುಬಿದಿರೆ: ನುಡಿಸಿರಿಗೆ ಸಮ್ಮೇಳನಕ್ಕೆ ಆರ್ಥಿಕ ಸಂಪನ್ಮೂಲ ಸೇರಿದಂತೆ ಪೂರಕ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಜವಾಬ್ದಾರಿಯನ್ನು ನಿಭಾಯಿಸಲು ಸಂಘಟಕರು ಮುಂದೆ ಬಂದರೆ ಹೊರ ಜಿಲ್ಲೆಗಳಲ್ಲೂ ನುಡಿಸಿರಿ ನಡೆಸಬಹುದು ಎಂದು ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ್ ಆಳ್ವ, `ನುಡಿಸಿರಿ ಸಮ್ಮೇಳನವನ್ನು ಬೇರೆ ಜಿಲ್ಲೆಯಲ್ಲಿ ನಡೆಸಬಾರದೇಕೆ? ಎನ್ನುವ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
mhoan alva
ನುಡಿಸಿರಿ ಎರಡನೇ ದಿನವಾದ ಶನಿವಾರ ಡಾ.ಎಂ.ಮೋಹನ್ ಆಳ್ವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಆರ್ಥಿಕ ಸಂಪನ್ಮೂಲ, ಮೂಲಭೂತ ಸೌಕರ್ಯ, ಸಮಯಪ್ರಜ್ಞೆಯೊಂದಿಗೆ ಶಿಸ್ತು ಇದ್ದು, ಇವುಗಳನ್ನೆಲ್ಲ ನಿಭಾಯಿಸುವ ಜವಾಬ್ದಾರಿಯುತ ಸಂಘಟಕರು ಸಿಕ್ಕಿದರೆ ನೀವು ಬಯಸಿದ ಊರುಗಳಲ್ಲಿ ನುಡಿಸಿರಿ ಸಮ್ಮೇಳನ ಮಾಡಬಹುದೆಂದರು.
ವೈಯಕ್ತಿಕ ವೈಭಿಕರಣದಿಂದ ದೂರ:
“ನುಡಿಸಿರಿ, ವಿರಾಸತ್ ನಂತಹ ಯಶಸ್ವಿ ಕಾರ್ಯಕ್ರಮದ ರೂವಾರಿಯಾದ ತಾವು  ಇನ್ನೊಬ್ಬ ಮೋಹನ ಆಳ್ವರನ್ನು ತಯಾರಿಸಿಲ್ಲವೇಕೆ?

ನಿಮ್ಮ ನಂತರ ಮುಂದೇನು ಎಂದು ಸಭಿಕರೋರ್ವರು ಪ್ರಶ್ನಿಸಿದರು. ಸುಂದರವಾದ ಊರೊಂದನ್ನು ಕಟ್ಟಿ ಅದರ ಮೂಲಕ ನಾಡಿನ ಅಬಿವೃದ್ಧಿಗೆ ಶ್ರಮಿಸುವವರು ಬಹಳಷ್ಟು ಜನರಿದ್ದಾರೆ. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಕೀರ್ತಿಗ ಳು ನನಗೊಬ್ಬನಿಗೆ ಸಲ್ಲಬೇಕೆಂಬ ಅಹಂ ನನಗಿಲ್ಲ. ನನ್ನ ವೈಯಕ್ತಿಕ ವೈಭವೀಕರಭಣದಿಂದ ನಾನು ಸದಾ ದೂರ ಇರುವವನು ಎಂದರು.
“ದೌರ್ಬಲ್ಯಗಳ ಲಾಭ ದುರದೃಷ್ಟಕರ:
ಶ್ರದ್ಧೆ, ಆಸಕ್ತಿಯೊಂದಿಗೆ ವಿಷಯದ ಅಳವನ್ನು ಪ್ರವೇಶಿಸಿದರೆ ಮಕ್ಕಳು ಬುದ್ಧಿವಂತರಾಗುತ್ತಾರೆ. ಅವರನ್ನು ನಿರಂತರವಾಗಿ ಸಾಹಿತಿ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದೌರ್ಬಲ್ಯವನ್ನು ಲಾಭವಾಗಿಸುತ್ತಿರುವುದು ದುರದೃಷ್ಟಕರ ಎಂದರು.

ಡಾ.ಎಂ.ಮೋಹನ್ ಆಳ್ವ

By suddi9

Leave a Reply

Your email address will not be published. Required fields are marked *