ಮೂಡಬಿದ್ರೆ :ಸಾಧನೆಗೆ ಯಾವತ್ತು ತನ್ನಲ್ಲಿರುವ ವೈಕಲತೆ ಅಡ್ಡಿ ಬರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾನೆ ಬದಾಮಿ ತಾಲೂಕಿನ ಹನುಮಸಾಗರದ ನಿವಾಸಿ ಮಣಿಕಂಠ ಎಂಬ ಚೋಟುದ್ದ ಬಾಲಕ. ಹುಟ್ಟಿನಿಂದ ಅಂಧನಾಗಿರುವ ಇತ ಪ್ರಸ್ತುತ ಗದಗ ಜಿಲ್ಲೆಯ ಹೊಳೆ – ಆಲೂರ ಜ್ಞಾನ ಸಿಂಧು ಅಂಧಮಕ್ಕಳ ವಸತಿ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುತಿದ್ದಾನೆ .

ಸಾಧನೆಯ ಶಿಖರ
ತನ್ನಲ್ಲಿ ವೈಕಲತೆ ಕಂಡು ಬಂದರು ಇವನ ಸಾಧನೆಗೆ ಇದು ಅಡ್ಡಿ ಬಂದಿಲ್ಲಾ . ಯೋಗ ಪಟುವಾದ ಇವನು 2012ರ ವಿಶ್ವ ಆರೋಗ್ಯ ಮೇಳದಲ್ಲಿ ಯೋಗ ಪ್ರದರ್ಶನ ನೀಡಿದ್ದಾನೆ , ವಿವಿಧ ರಾಷ್ಟ್ರೀಯ ಹಬ್ಬ ಹಾಗೂ
ಧಾರ್ಮಿಕ ಹಬ್ಬಗಳಲ್ಲಿ ರಾಜ್ಯದ ಎಲ್ಲೆಡೆ ಕಾರ್ಯಕ್ರಮ ನೀಡಿದ್ದಾನೆ ,2013 ರಲ್ಲಿ ನಡೆದ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ನಾಟ್ಯ ಯೋಗ ಎಂಬ ವಿನೂತನ ಕಾರ್ಯಕ್ರಮ ನೀಡುತ್ತಾ ಬಂದಿದ್ದಾನೆ ಎಂದು ಇವನ ಶಾಲಾ ಶಿಕ್ಷಕ ಶಿವಾನಂದ ಕೇಲೂರು ಇವನ ಸಾಧನೆಯ ಬಗ್ಗೆ ಹೆಮ್ಮೆಯಿಂದ ವಿವರಿಸುತ್ತಾರೆ .
ಸಿದ್ದಲಿಂಗಯ್ಯರನ್ನು ಪರಿಚಯಸುವ ಮಣಿಕಂಠ
ಸಮ್ಮೇಳನದ ರುವಾರಿ ಡಾ|| ಮೋಹನ ಆಳ್ವರು ಅಂಧ ಮಕ್ಕಳ ಗೌರವಾರ್ಥವಾಗಿ ಈತನಿಗೆ ಈ ಅವಾಕಾಶ ಕಲ್ಪಿಸಿದ್ದಾರೆ. ಸಿದ್ದಲಿಂಗಯ್ಯನವರ ಪರಿಚಯ 6 7 ಪುಟವಿದೆ ಅದನ್ನು , ಶಿಕ್ಷಕಿ ಕಸ್ತೂರಿ ರಾಜಪ್ಪ ಬ್ರೈಲ್ ಲಿಪಿಯಲ್ಲಿ ಮಣಕಂಠನಿಗೆ ಹೇಳಿ ಕೊಡುತ್ತಾರೆ ಆತ ರತ್ನಕರವರ್ಣ ವೇದಿಕೆಯಲ್ಲಿ ವಾಚಿಸಲಿದ್ದಾನೆ . ಆತನಿಗೆ ಇದು ಹೆಮ್ಮೇಯ ಸಂಗತಿಯಾಗಿದೆ
