ಮಾಜಿ ಸಚಿವ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾಶ್ರಮದ ನಿವಾಸಿಗಳಿಗೆ ಊಟ ಹಾಗೂ ಕಿಟ್ ವಿತರಣೆ
ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೇಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ಮೇರೆಮಜಲು ಸೇವಾಶ್ರಮ ಹಾಗೂ ಸಿದ್ದಕಟ್ಟೆ ಸೇವಾಶ್ರಮದ ನಿವಾಸಿ ಗಳಿಗೆ ಮಧ್ಯಾಹ್ನದ ಊಟ ಹಾಗೂ ದಿನಸಿ ಸಾಮಾಗ್ರಿಗಳ ವಿತರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಅಬ್ಬಾಸ್ ಆಲಿ,ಪಾಣೆಮಂಗಳೂರು ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ರೋಶನ್ ರೈ, ಪ್ರಮುಖರಾದ ಅರುಣ್ ಶೆಟ್ಟಿ, ನಿರಂಜನ ಶೆಟ್ಟಿ, ಮಧುಸೂದನ್ ಶೆಣೈ, ನವಾಜ್ ಬಡಕಬೈಲು, ಮನೋಜ್ ಕಳ್ಳಿಗೆ, ರವಿರಾಜ್ ಜೈನ್ ಮಲ್ಲಿಕಾ ಪಕಳ, ಸಿದ್ದೀಕ್ ಗುಡ್ಡೆಯಂಗಡಿ ಮತ್ತಿತರರ ಪ್ರಮುಖ ರು ಹಾಜರಿದ್ದರು.