ಕಮರಿಗೆ ಉರುಳಿದ ರಿಕ್ಷಾ : ಚಾಲಕ ಮೃತ್ಯು
ಉಳ್ಳಾಲ: ರಿಕ್ಷಾ ಕಮರಿಗೆ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಪಾನೀರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಆನಂದ್ ಸಪಲ್ಯ (70)ಮೃತರು. ಕೋಟೆಕಾರು ರಿಕ್ಷಾ ಪಾಕ್9ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಅವರು ನಿನ್ನೆ ರಾತ್ರಿ ದೇರಳಕಟ್ಟೆ ಕಡೆಗೆ ಬಾಡಿಗೆಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಪಾನೀರು ಅಸಿಸ್ಸಿ ಶಾಲೆ ಬಳಿ ಕಮರಿಗೆ ಉರಳಿ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.