ಮಂಜನಾಡಿ: ಶಾರ್ಟ್ ಸರ್ಕ್ಯೂಟ್ , ಕಾಟನ್ ಇಂಡಸ್ಟ್ರೀಸ್ ಬೆಂಕಿಗಾಹುತಿ
ಉಳ್ಳಾಲ: ಮಂಜನಾಡಿ ಸಮೀಪದ ತೌಡುಗೋಳಿ ಕ್ರಾಸ್ ನಲ್ಲಿರುವ ಕಾಟನ್ ಇಂಡಸ್ಟ್ರೀಸ್ ವೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಿಡಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ದೇರಳಕಟ್ಟೆ ನೋಮನ್ ಎಂಬವರಿಗೆ ಸೇರಿದ ಈ ಹತ್ತಿಯ ಪ್ಯಾಕ್ಟರಿಯಲ್ಲಿ ಘಟನೆ ಸಂಭವಿಸಿದೆ.
ಘಟನೆ ನಡೆದ ವೇಳೆ ಸುಮಾರು ನಾಲ್ಕು ಜನ ಸಿಬ್ಬಂದಿಗಳು ಒಳಗಿದ್ದು ಬೆಂಕಿ ಬಿದ್ದಾಕ್ಷಣ ಹೊರ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಅಪಾರ ಪ್ರಮಾಣದ ಹತ್ತಿಯ ವಸ್ತುಗಳು ನಾಶವಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.