ಕಜೆಕಾರ್ ಸಾಮೂಹಿಕ ಸತ್ಯನಾರಾಯಣ ಪೂಜೆ
ಬಂಟ್ವಾಳ: ತಾಲ್ಲೂಕಿನ ಕಜೆಕಾರ್ ಶ್ರೀ ಮಹಾದೇವೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಶನಿವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಸಭಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.

ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಯೋಜನಾಧಿಕಾರಿ ಪಿ.ಜಯಾನಂದ ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಕೆ.ಎ.ಸತೀಶ್ಚಂದ್ರ ಪೂಜಾರಿ, ಎಂ.ತುಂಗಪ್ಪ ಬಂಗೇರ ಮತ್ತಿತರರು ಇದ್ದರು.