ಕಾಜಿಲ ಗಿಡಮರಗಳೊಂದಿಗೆ ರಸ್ತೆಗೆ ಬಿದ್ದ ಬಂಡೆಕಲ್ಲು
ಕೈಕಂಬ: ಗುರುಪುರ ಕೈಕಂಬದಿoದ ಪೊಳಲಿಗೆ ಸಂಪರ್ಕಿಸುವ ವಿವೇಕಾನಂದ ರಸ್ತೆಯ ಕಾಜಿಲ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಗಿಡಮರಗಳೊಂದಿಗೆ ಬಂಡೆಕಲ್ಲು ರಸ್ತೆಗೆ ಬಿದ್ದಿದೆ.
ಕಳೆದ ನಾಲ್ಕುದಿನಗಳಿಂದ ಮಳೆಯಿದ್ದು ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನ ಸಂಚಾರವಿದ್ದ ತಿರುವು ರಸ್ತೆ ಇದಾಗಿದ್ದು ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿದ್ದು ಕೂಡಲೇ ಸಂಬoದಪಟ್ಟ ಇಲಾಖಾಧೀಕಾರಿಗಳು ಈ ಬಗ್ಗೆ ಇತ್ತ ಗಮನ ಹರಿಸಿ ಶೀಘ್ರ ತೆರವುಗೊಳಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.