ಎನ್ ಐ ಎ ತನಿಖೆ ಪಾರದರ್ಶಕ ವಾಗಿರಲಿ: ರಿಯಾಜ್ ಫರಂಗಿಪೇಟೆ
ಬಂಟ್ವಾಳ: ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ, ಎನ್ ಐ ಎ ತನಿಖೆ ಪಾರದರ್ಶಕ ವಾಗಿರಲಿ ಎನ್ ಐ ಎ ದಾಳಿ ಬಳಿಕ ಮಾಧ್ಯಮಗಳಿಗೆ ರಿಯಾಝ್ ಫರಂಗಿಪೇಟೆ ಹೇಳಿಕೆ ನೀಡಿದ್ದಾರೆ.
ಎಸ್ ಡಿ ಪಿ ಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆ ಮೇಲೆ ಎನ್ ಐ ಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಪೋಲೀಸ್ ತಂಡ ಮರಳಿದ ಬಳಿಕ ಮಾಧ್ಯಮ ಹೇಳಿಕೆ ನೀಡಿದರು.
ಬಿಹಾರ ಪ್ರಕರಣವೊಂದರ ವಿಚಾರದಲ್ಲಿ ತನಿಖೆ ಮಾಡಿದ ವೇಳೆ ನನ್ನ ಮತ್ತು ನನ್ನ ಪತ್ನಿಯ ಮೊಬೈಲ್ ನ್ನು ಎನ್ ಐ ಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಜುಲೈ ಪ್ರಕರಣ ಸಂಬಂಧಿಸಿದಂತೆ ಎನ್ ಐ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ.ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.ಎನ್ ಐ ಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆ ಕೇಳಿತ್ತು.
ಪ್ರಧಾನಿ ಮೋದಿ ಕಾರ್ಯಕ್ರಮ ದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಪೂರಕ ಪರಿಶೀಲನೆ ಮಾಡುತ್ತಿದೆ.ಎಂದು ಅವರು ಮಾಹಿತಿ ನೀಡಿದರು.
ಎನ್.ಐ.ಎ ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ, ಕೇಂದ್ರ ಸರ್ಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು ಎಂದು ಅವರು ಆರೋಪ ವ್ಯಕ್ತಪಡಿಸಿದರು.