ಶ್ರೀ ಮಹಾಮಾಯಿ ಸ್ಪೋರ್ಟ್ಸ್ ಕ್ಲಬ್ :ವಾರ್ಷಿಕ ಮಹಾ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಕೈಕಂಬ: ಶ್ರೀ ಮಹಾ ಮಾಯಿ ಸ್ಪೋರ್ಟ್ಸ್ ಕ್ಲಬ್ (ರಿ) ಉಳಾಯಿಬೆಟ್ಟು ಇದರ ವಾರ್ಷಿಕ ಸಭೆ ಸೆ.04ರಂದು ಭಾನುವಾರ ಬೆಳಿಗ್ಗೆ 8:30 ಕ್ಕೆ ಸರಿಯಾಗಿ ಮುಕೇಶ್ ಕಾಂತರಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಕ್ಲಬ್ಬಿನಲ್ಲಿ ಜರಗಿತು. ಜೊತೆಕಾರ್ಯದರ್ಶಿ ಸನತ್ ಕುಮಾರ್ ಇವರು ಸರ್ವರನ್ನೂ ಸ್ವಾಗತಿಸಿದರು.ಕಾರ್ಯದರ್ಶಿ ಚೇತನ್ ಅಮೀನ್ 2021-22ಸಾಲಿನ ವರದಿ ಮಂಡಿಸಿದರು

2021-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶತಿಲ್ ತಲ್ಲಿಮಾರ್ ಮುಂಡಿಸಿದರು. ಬಳಿಕ ಕ್ಲಬ್ಬಿನ ಸದಸ್ಯರು ಅನುಮೋದಿಸಿದರು. 2022-23 ನೇ ಸಾಲಿಗೆ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿ ಗುತ್ತು, ಅಧ್ಯಕ್ಷ ಶ್ರೀಧರ್ ತಲ್ಲಿ ಮಾರ್, ಉಪಾಧ್ಯಕ್ಷ ರಮಾನಾಥ ಕಿನ್ನಿ ಬೆಟ್ಟು, ಪ್ರಧಾನ ಕಾರ್ಯದರ್ಶಿ ಚೇತನ್ ಗಾಣಿಗ, ಜೊತೆ ಕಾರ್ಯದರ್ಶಿ ಪ್ರಶಾಂತ್ ಗಾಣಿಗ, ಕೋಶಾಧಿಕಾರಿ ಜಯಂತ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಗಳು: ಸಂತೋಷ್ ಪೂಜಾರಿ, ಗಣೇಶ್ ಸಪಲಿಗ, ಸಾಂಸ್ಕೃತಿಕ ಕಾರ್ಯದರ್ಶಿಗಳು ಯಾದವ್ ಮುಂಡಾಡಿ,ಗಣೇಶ್ ಮಜುಗುಳಿ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಕಮಲಾಕ್ಷ ತಲ್ಲಿಮಾರ್, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟು ಗುತ್ತು, ದಿವಾಕರ್ ತಲ್ಲಿಮಾರ್, ಜಯರಾಮ್ ರೈ, ಉಳಾಯಿಬೆಟ್ಟು ಗುತ್ತು, ಪ್ರವೀಣ್ ತಲ್ಲಿಮಾರ್, ದಿನೇಶ್ ತಲ್ಲಿಮಾರ್, ಚಂದ್ರಶೇಖರ್ ತಲ್ಲಿಮಾರ್ ,ಮುಕೇಶ್ ಕಾಂತಾರ ಬೆಟ್ಟು, ಈ ಸಭೆಯಲ್ಲಿ 2022-23 ರ ಸಾಲಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು. ಕಾರ್ಯದರ್ಶಿ ಚೇತನ್ ಅಮೀನ್ ವಂದಿಸಿದರು