ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್: ಚೆಸ್‌ಪಂದ್ಯಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ‘ಬೋರ್ಡ್ ಪ್ರಶಸ್ತಿ’
ಬಂಟ್ವಾಳ: ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ ಇಲ್ಲಿನ೧೦ನೇ ತರಗತಿಯ ವಿದ್ಯಾರ್ಥಿಗಳಾದ ಧ್ಯಾನ್ ಕೃಷ್ಣ ಶೆಟ್ಟಿ, ಅದ್ವಿತ್ ಎಸ್ ಶೆಟ್ಟಿ, ರಿಯಾನ ಸೋನಾಲಿ ಪಿಂಟೋ, ವೈಭವ್ ವಿ ಪೈ ಮತ್ತು ೮ನೇ ತರಗತಿ ವಿದ್ಯಾರ್ಥಿ ದೀನ್‌ರಾಮ್ ಶೆಟ್ಟಿ ಇವರನ್ನೊಳಗೊಂಡ ತಂಡವು ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂಶಾಲೆ, ಕರ್ನ್ನಪಾಡಿ, ಉಡುಪಿ ಇಲ್ಲಿಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಸಿ ಶಾಲೆಗಳ ಒಕ್ಕೂಟವು ಆಯೋಜಿಸಿದ್ದ ೧೭ ವರ್ಷದೊಳಗಿನ ವಯೋಮಿತಿಯವರ ಅಂತರ್ ಶಾಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಬೋರ್ಡ್ ಪ್ರಶಸ್ತಿಯನ್ನು ಗಳಿಸಿರುತ್ತಾರೆ.
ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ (ರಿ)ದಅಧ್ಯಕ್ಷಕೂಡಿಗೆ ಪಾಂಡುರಂಗ ಶೆಣೈ,ಉಪಾಧ್ಯಕ್ಷೆ ವತ್ಸಲ ಕಾಮತ್, ಕರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ ಹಾಗೂ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರುಅಭಿನಂದನೆ ಸಲ್ಲಿಸಿದ್ದಾರೆ.