ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವ ನಡೆಯಿತು.
ನ. 15 ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಮರುದಿನ ಬೆಳಗ್ಗೆ 8 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು.
ಶನಿವಾರ ಬೆಳಗ್ಗೆ 6.30ಕ್ಕೆ ಪ್ರಾರ್ಥನೆ,ಗಣಹೋಮ, 7.30ಕ್ಕೆ ಮಹಾಪೂಜೆಯ ಬಳಿಕ 8 ಗಂಟೆಗೆ ದೀಪ ಪ್ರಜ್ವಲನಗೊಂಡಿತು.
ವಿನಾಯಕ ದೇವಸ್ಥಾನದ ಅರ್ಚಕ ಶಸಿಧರ ಭಟ್ ದೀಪ ಬೆಳಗಿಸಿದರು, ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ರಾವ್, ಹರೀಶ್ ರಾವ್ , ಸೋಮಶೇಖರ ಶೆಟ್ಟಿ ಕೀನ್ಯ, , ಸಂಕಪ್ಪ ಶೇಖ ಬಡಕಬೈಲ್, ಸೋಮಶೇಖರ ಶೆಟ್ಟಿ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ವಿನಾಯಕ ಭಜನಾ ಮಂಡಳಿ ಯವರಿಂದ ಭಜನೆ ಪ್ರಾರಂಭ ಗೊಂಡಿತು.













