ಫ್ರೀ ಗಣೇಶನಿಗಾಗಿ ಮುಗಿಬಿದ್ದ ಯುವಕರು
ಮಂಡ್ಯ: ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ವಿಧ ವಿಧದ ಗಣೇಶ ಮೂರ್ತಿಗಳನ್ನು ಖರೀದಿಸಿ ಮನೆಗಳಲ್ಲಿ, ಏರಿಯಾಗಳಲ್ಲಿ ಕೂರಿಸಲಾಗುತ್ತಿದೆ. ಜಿಲ್ಲೆಯ ಪಾಂಡವಪುರದಲ್ಲಿ ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಇಂದ್ರೇಶ್ ಅವರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೇ ಘೋಷಣೆ ಮಾಡಿದ್ದರು. ನೋಂದಣಿ ಮಾಡಿಕೊಳ್ಳುವಂತೆ ಮೇಲುಕೋಟೆ ಕ್ಷೇತ್ರದ ಜನರಿಗೆ ಇಂದ್ರೇಶ್ ಕರೆ ನೀಡಿದ್ದರು.
ಉಚಿತವಾಗಿ ಗಣೇಶ ಮೂರ್ತಿ ಸಿಗುತ್ತದೆ ಎಂಬ ಆಸೆಯಿಂದ ನೂರಾರು ಸಂಖ್ಯೆಯಲ್ಲಿ ಯುವಕರು ಆಗಮಿಸಿದ್ದರು. ಗಣೇಶ ಮೂರ್ತಿಗಾಗಿ ನಾ ಮುಂದು ತಾ ಮುಂದೆ ಎಂದು ಮುಗಿಬಿದ್ದಿದ್ದರು. ಮೊದಲಿಗೆ ಇಂದ್ರೇಶ್ ಅವರು ತಿರಿಸಿದ್ದ 600 ಗೌರಿ-ಗಣೇಶ ಮೂರ್ತಿ ಕ್ಷಣಾರ್ಧದಲ್ಲಿ ಖಾಲಿ ಆಯಿತು.