ಮಂಗಳೂರು ತಾಲೂಕು ಬಿಲ್ಲವ ಸಂಘದ ಉದ್ಘಾಟನಾ ಸಮಾರಂಭ
ಕೈಕಂಬ : ಹೊಸದಾಗಿ ರಚನೆಯಾಗಿರುವ ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಇದರ ಉದ್ಘಾಟನಾ ಸಮಾರಂಭ ಸೆ.೪ರಂದು ಬೆಳಿಗ್ಗೆ ೧೦ಕ್ಕೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಶ್ರೀ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದ್ದು, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮತ್ತು ರಾಜ್ಯದ ಮಾಜಿ ಸಚೇತಕ ವಸಂತ ಬಂಗೇರ ಅವರು ಸಂಘಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ಮಂಗಳೂರು ಮಲ್ಲಿಕಟ್ಟೆಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಮಾಹಿತಿ ನೀಡಿ, “ತಾಲೂಕು ಬಿಲ್ಲವ ಸಂಘದೊಂದಿಗೆ ೬೦ಕ್ಕೂ ಹೆಚ್ಚು ಬಿಲ್ಲವ ಸಂಘಗಳು ಸಂಪರ್ಕದಲ್ಲಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮತ್ತು ಅವರ ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಸಂಘ ಕೆಲಸ ಮಾಡಲಿದೆ. ಸಂಘವು ರಾಜಕೀಯ ಪ್ರಜ್ಞೆಯೊಂದಿಗೆ ಕೆಲಸ ಮಾಡಲಿದೆಯೇ ಹೊರತು ರಾಜಕೀಯ ಉದ್ದೇಶ ಹೊಂದಿಲ್ಲ. ಸಂಘವು ಸಮಾಜ ಬಾಂಧವರ ಶಿಕ್ಷಣ, ಉದ್ಯೋಗ, ಸ್ವ-ಉದ್ಯೋಗ, ಧಾರ್ಮಿಕ ಮತ್ತು ರಾಜಕೀಯ ಪ್ರಜ್ಞೆ, ಬಡಜನರ ಉದ್ಧಾರಕ್ಕೆ ಆದ್ಯತೆ ನೀಡಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆ ರೂಪಿಸಿಕೊಳ್ಳಲಾಗಿದೆ” ಎಂದರು.
ಧರ್ಮದ ಬುನಾದಿಯಲ್ಲಿ ಸಂಘಟನೆ ಬಲಪಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಸಮಾಜದ ಮಕ್ಕಳಿಗೆ ಧರ್ಮ ಆಧರಿತ ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದೇವೆ ಎಂದರು.
ಸೆ. ೪ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ಮುಖಂಡ ಬಿ. ಕೆ. ಹರಿಪ್ರಸಾದ್, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಕುಮಾರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಮುಖಂಡರಾದ ಸೈದಪ್ಪ ಗುತ್ತೇದಾರ್ ಬೆಂಗಳೂರು, ಕೆ. ಟಿ. ಸುವರ್ಣ, ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರ್, ರಾಜಶೇಖರ ಕೋಟ್ಯಾನ್, ನವೀನ್‌ಚಂದ್ರ ಸುವರ್ಣ, ಚಂಚಲಾ ತೇಜೋಮಯ, ಸಾಯಿರಾಮ್, ಕೆ. ಚಿತ್ತರಂಜನ್, ಪದ್ಮರಾಜ, ಎಂ ರಾಮಚಂದ್ರ, ಚಿತ್ತರರಂಜನ್ ಬೋಳಾರ್, ಜಯಾನಂದ, ಟಿ. ನಾರಾಯಣ ಪೂಜಾರಿ, ಡಾ. ಸದಾನಂದ ಸುವರ್ಣ, ಗಣೇಶ್ ಅಮೀನ್ ಸಂಕಮಾರ್, ಅಕ್ಷಿತ್ ಸುವರ್ಣ, ಉದಯ ಅಮೀನ್, ಉದಯ ಪೂಜಾರಿ, ಎಂ. ಎಸ್. ಕೋಟ್ಯಾನ್, ಲೀಲಾಕ್ಷ ಕರ್ಕೇರ, ಮಹಾಬಲ ಪೂಜಾರಿ ಕಡಂಬೋಡಿ, ಸುರೇಶ್ ಚಂದರ್ ಕೋಟ್ಯಾನ್, ಅವಿನಾಶ್ ಸುವರ್ಣ ಪಾಲ್ಗೊಳ್ಳಲಿದ್ದಾರೆ.
ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ರಂಜನ್ ಮಿಜಾರ್, ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ, ಕಾರ್ಯಾಧ್ಯಕ್ಷರಾದ ಸುರೇಶ್ ಚಂದರ್ ಕೋಟ್ಯಾನ್ ಮತ್ತು ಪಾರ್ವತಿ ಅಮೀನ್, ಸಲಹೆಗಾರರಾದ ದಿವಾಕರ ಅಮೀನ್ ಮತ್ತು ರಾಘವೆ ಕೆ ಉಪಸ್ಥಿತರಿದ್ದರು. ಲೋಕನಾಥ ಪೂಜಾರಿ ವಂದಿಸಿದರು.