ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ಆ.29ರಂದು ಸೋಮವಾರ ನಡೆದ ಅಗ್ನಿವೀರ್ ಆಯ್ಕೆ ಶಿಬಿರದಲ್ಲಿ ಅಭ್ಯರ್ಥಿಗಳೊಂದಿಗೆ ಶಾಸಕ ರಾಜೇಶ ನಾಯ್ಕ್ ಸಂವಾದ ನಡೆಸಿದರು.

ಬಂಟ್ವಾಳ ಸೆ.೧ ರಂದು ಹಾವೇರಿಯಲ್ಲಿ ನಡೆಯಲಿರುವ ‘ಅಗ್ನಿವೀರ್’ ಸೈನಿಕರ ಆಯ್ಕೆ ಶಿಬಿರಕ್ಕೆ ತೆರಳಲಿರುವ ಅಭ್ಯರ್ಥಿಗಳೊಂದಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ಸಂವಾದ ನಡೆಸಿದರು. ಇದೇ ವೇಳೆ ಹಾವೇರಿಗೆ ತೆರಳಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ಶಾಸಕರ ಆಪ್ತ ಸಹಾಯಕ ಶಿವಾನಂದ ಪೂಜಾರಿ ಶಿಬಿರಾರ್ಥಿಗಳಿಗೆ ವಿವಿಧ ದಾಖಲೆಪತ್ರಗಳ ಸಲ್ಲಿಕೆ ಬಗ್ಗೆ ಮಾಹಿತಿ ನೀಡಿದರು. ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ, ಪೂವಪ್ಪ ಮೆಂಡನ್, ರಘುರಾಮ ಶೆಟ್ಟಿ ಕನ್ಯಾನ, ಪ್ರಣಾಮ್ ರಾಜ್ ಇದ್ದರು.

By Suddi9

Leave a Reply

Your email address will not be published. Required fields are marked *