Published On: Mon, Aug 29th, 2022

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಪ್ರಕೃತಿ” ಕೃತಿ ಲೋಕಾರ್ಪಣೆ

ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಹಿತ-ಮಿತವಾದ ಸೂಕ್ತ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ ಮತ್ತು ಆಯುಷ್ಯ ವೃದ್ಧಿಯೊಂದಿಗೆ ನಾವು ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ವಸಂತಮಹಲ್‌ನಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರಕಜೆ ಅವರ ಆರನೆ ಕೃತಿ “ಪ್ರಕೃತಿ” ಬಿಡುಗಡೆಗೊಳಿಸಿ ಮಾತನಾಡಿದರು.

ಆಯುರ್ವೇದ ಪದ್ಧತಿ ಬಗ್ಯೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗಬೇಕು. ನಮ್ಮನ್ನು ನಾವು ತಿಳಿದುಕೊಂಡು ನಮಗೆ ಸೂಕ್ತವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಆಹಾರವೇ ಔಷಧಿಯಾಗಬೇಕು ಅಲ್ಲದೆ ಔಷಧಿಯೇ ಆಹಾರವಾಗಬಾರದು. ಆಧುನಿಕ ಜೀವನ ಶೈಲಿ, ಆಹಾರ-ವಿಹಾರ, ಒತ್ತಡದ ಕೆಲಸಗಳೆ ಆರೋಗ್ಯ ಹದಗೆಡಲು ಕಾರಣವಾಗಿದೆ.

ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದರು. ಶತಮಾನಗಳಿಂದ ಬಳಸುತ್ತಿದ್ದ ಪ್ರಕೃತಿಚಿಕಿತ್ಸಾ ಪದ್ಧತಿ, ಯೋಗಾಭ್ಯಾಸ, ಆಯುರ್ವೇದ ಪದ್ಧತಿಯಿಂದಆರೋಗ್ಯಭಾಗ್ಯದರಕ್ಷಣೆ ಸಾಧ್ಯವಾಗುತ್ತದೆ. ಆಯುರ್ವೇದ ಪದ್ಧತಿ ಬಗ್ಯೆಉನ್ನತಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಸಂಶೋಧನಾ ಫಲಿತಾಂಶವನ್ನುಆಯುರ್ವೇದಚಿಕಿತ್ಸಾ ಪದ್ಧತಿಯಲ್ಲಿ ಬಳಸಬೇಕು. ಇದಕ್ಕಾಗಿಉಡುಪಿಯಲ್ಲಿರುವಎಸ್.ಡಿ.ಎಂ. ಆಯುರ್ವೇದಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗಿದೆಎAದು ಹೆಗ್ಗಡೆಯವರು ತಿಳಿಸಿದರು. ಅನೇಕ ವೈವಿಧ್ಯಮಯ ಗ್ರಂಥಗಳು ತಾಳೆಗರಿಯಲ್ಲಿವೆ ಎಂದು ಅವರು ತಿಳಿಸಿದರು.

ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆಗಳಲ್ಲಿ ಉತ್ತಮ ಪ್ರತಿಕ್ರಿಯೆದೊರಕುತ್ತಿದ್ದುಇಲ್ಲಿ ಸೇರಿದವರೆಲ್ಲ ಸಂಪೂರ್ಣಗುಣಮುಖರಾಗಿ ಹೋಗುತ್ತಾರೆ. ಅಲೊಪತಿಚಿಕಿತ್ಸಾ ವಿಧಾನದಲ್ಲಿ ಶಮನವಾಗದ ರೋಗಗಳು ಕೂಡಾಆಯುರ್ವೇದ ಪದ್ಧತಿಯಲ್ಲಿ ಸಂಪೂರ್ಣಗುಣವಾದ ಸಾಕಷ್ಟು ಉದಾಹರಣೆಗಳಿವೆ ಎಂದುಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯಪೂರ್ಣ ಬದುಕಿಗೆ ಉಪಯುಕ್ತವಾದ ಮಾಹಿತಿಯ ಕಣಜವಾಗಿ “ಪ್ರಕೃತಿ” ಆಕರ್ಷಕವಾಗಿ ಮೂಡಿ ಬಂದಿದೆ. ಎಲ್ಲಾ ಲೇಖನಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ ಎಂದು ಡಾ. ಹೆಗ್ಗಡೆಯವರು ಡಾ.ಕಜೆ ಅವರ ಕೃತಿ “ಪ್ರಕೃತಿ” ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವಎಸ್. ಅಂಗಾರ ಮಾತನಾಡಿ, ಧರ್ಮದ ನೆಲೆಯಲ್ಲಿ ನಾವು ಕರ್ಮ ಮಾಡಿ ಗೌರವಯುತ ಜೀವನ ನಡೆಸಬೇಕು. ಪ್ರಗತಿಯ ಹೆಸರಿನಲ್ಲಿ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನರೋಗ ರುಜಿನಗಳಿಗೆ ಕಾರಣವಾಗಿದೆ.

ಯಾವುದೇ ಪಾರ್ಶ್ವಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನೆ ನಾವು ಬಳಸಬೇಕು ಎಂದು ಅವರು ಕಿವಿಮಾತು ಹೇಳಿದರು. ಡಾ. ಗಿರಿಧರಕಜೆ ಅವರ ಆಯುರ್ವೇದ ಚಿಕಿತ್ಸಾ ಪದ್ಧತಿಯ ಶುಶ್ರೂಷೆಯಿಂದ ತಾನು ಕೊರೊನಾದಿಂದ ಮುಕ್ತಿ ಪಡೆದಿರುವುದಾಗಿ ಸಚಿವರು ತಿಳಿಸಿದರು.


ಪ್ರಜಾವಾಣಿಪತ್ರಿಕೆಯ ಪ್ರಧಾನಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಆಯುರ್ವೇದ ನಮ್ಮಜೀವನ ಪದ್ಧತಿಯಾಗಬೇಕು. ಆಯುರ್ವೇದ ಪದ್ಧತಿಯಿಂದ ನಮ್ಮಆರೋಗ್ಯ, ಆಯುಷ್ಯ ಮತ್ತುಆನಂದ ವೃದ್ಧಿಯಾಗಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಆದರೆ ಇಂದಿನ ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ನಾವು ಹಗಲು ಮಾಡುವ ಕೆಲಸವನ್ನು ರಾತ್ರಿ ಮಾಡುತ್ತೇವೆ. ರಾತ್ರಿ ಮಾಡುವ ಕೆಲಸವನ್ನು ಹಗಲು ಮಾಡುತ್ತೇವೆ.

ಪ್ರಕೃತಿಯಿಂದ ದೂರವಾದಷ್ಟು ನಮ್ಮಲ್ಲಿ ವಾತ, ಪಿತ್ತ, ಕಫಗಳು ಜಾಸ್ತಿಯಾಗುತ್ತವೆ. ಆಹಾರ ಮತ್ತು ಔಷಧಿ ಬೇರೆ ಬೇರೆಅಲ್ಲ. ಒಂದೇ ಆಗಿರಬೇಕು ಎಂದು ಅವರು ಹೇಳಿದರು. ಟಿ.ವಿ. ೯ ವಾಹಿನಿಯ ಪ್ರಧಾನ ನಿರೂಪಕ ರಂಗನಾಥ್ ಭಾರಧ್ವಾಜ್ ಮಾತನಾಡಿ ಸ್ವಚ್ಛ ಭಾರತ ನಿರ್ಮಾಣದ ಆಶಯದಂತೆ ಸ್ವಸ್ಥ ಬಾರತವೂ ನಮ್ಮ ಗುರಿಯಾಗಬೇಕು.

ಮನೆಯ ಹಿತ್ತಲಲ್ಲಿರುವ ಗಿಡಮೂಲಿಕೆಗಳು ಕೂಡಾ ಔಷಧೀಯ ಗುಣ ಹೊಂದಿದ್ದು ನಮ್ಮರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಮನಸ್ಸುಗಳು ಸದಾಜಾಗೃತವಾಗಿ, ಕಲ್ಮಶರಹಿತವಾಗಿದ್ದು, ಮಾನವೀಯ ಸಂಬಂಧಗಳೊಂದಿಗೆ ಜೀವನ ಮೌಲ್ಯಗಳನ್ನು ಉಳಿಸಿ, ಬೆಳೆಸಿದಾಗ ಆರೋಗ್ಯವಂತರಾಗಲು ಸಾಧ್ಯ.

ಯೋಗಕ್ಕೆದೊರಕಿದಷ್ಟು ಮಹತ್ವ ಮತ್ತು ಪ್ರಚಾರ ಆಯುರ್ವೇದಕ್ಕೂ ಸಿಗಬೇಕು ಎಂದುಅವರು ಹೇಳಿದರು. “ಪ್ರಕೃತಿ” ಕೃತಿಯ ಲೇಖಕ ಡಾ. ಗಿರಿಧರ ಕಜೆ ಪುಸ್ತಕದ ಬಗ್ಯೆ ಸವಿವರ ಮಾಹಿತಿ ನೀಡಿದರು. ಸೆಲ್ಕೊ ಸಂಸ್ಥೆಯ ಸಿ.ಇ.ಒ. ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೋವಿಂದ ಪ್ರಸಾದ್‌ ಕಜೆ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಧನ್ಯವಾದವಿತ್ತರು.

ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹೆಗ್ಗಡೆಯವರಿಗೆ ಅಭಿನಂದನೆ ಉಜಿರೆ ರಾಜ್ಯಸಭಾ ಸದಸ್ಯರಾಗಿ ಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಧರ್ಮಸ್ಥಳದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಗೌರವ ಕಾರ್ಯದರ್ಶಿ ವಿನಯ ಆಚಾರ್, ಗೌರವಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷರುಗಳಾದ ಮಂಜುನಾಥ ರೇವಣ್‌ಕರ್ (ಮಂಗಳೂರು) ವೇಣೂಗೋಪಾಲ ಶೆಟ್ಟಿ (ಮೂಡಬಿದ್ರೆ) ಸೇಸಪ್ಪರೈ (ಕಡಬ) ಚಂದ್ರಶೇಖರ ಪೆರಾಲ್ (ಸುಳ್ಯ) ಡಾ. ಯದುಪತಿಗೌಡ (ಬೆಳ್ತಂಗಡಿ) ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಅರುಣಾ, ತೇಜಸ್ವಿ ಅಂಬೆಕಲ್ಲು, ರಾಮಚಂದ್ರ ಪಳ್ಳತ್ತಡ್ಕ, ಪೂವಪ್ಪ ನೇರಳಕಟ್ಟೆ ಮತ್ತು ಮನಮೋಹನ ಪುತ್ತೂರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter