Published On: Mon, Aug 29th, 2022

ಗುಜರಾತ್‌ನ ದಮಾನ್‌ನಲ್ಲಿ ಸಿರಿಚಾವಡಿ ಪುರಸ್ಕಾರ ಪ್ರದಾನ-ತುಳು ಚಾವಡಿ ಕಾರ್ಯಕ್ರಮ ತುಳುವರು ಮೆತ್ತನೆಯ ಮನಸ್ಸುವುಳ್ಳವರಾಗಿದ್ದಾರೆ: ದಯಾನಂದ ಕತ್ತಲ್‌ಸರ್

ಗುಜರಾತ್: ಹೊತ್ತ ಭೂಮಿ, ಹೆತ್ತ ತಾಯಿ ಹಾಗೂ ಸಂಸ್ಕಾರ ನೀಡಿದ ಗುರುಗಳಿಗೆ ಋಣಿಯಾಗಿ ಬಾಳುವ ತುಳುವರು ತುಳುಸಂಸ್ಕೃತಿಯ ವೈಶಿಷ್ಟ್ಯದಿಂದ ನೆಮ್ಮದಿಯಾಗಿದ್ದಾರೆ. ತುಳುವ ನೆಲದ ದೈವ ದೇವರುಗಳಿಗೆ ಧಾರ್ಮಿಕ ಸೇವೆ ನೀಡುವುದು ಮಾತ್ರವಲ್ಲದೆ ತುಳುನಾಡಿನ ಶೋಷಿತ ವರ್ಗದ ಜನತೆ, ವಿದ್ಯಾಭ್ಯಾಸಕ್ಕೆ ಶಕ್ತಿತುಂಬಿ ನಾಡಿನಜನರ ಬದುಕಿಗೆ ಆಸರೆ ನೀಡಿದವರೇ ಹೊರನಾಡ ತುಳುವರಾಗಿದ್ದಾರೆ. ತುಳುವರು ಮೆತ್ತನೆಯ ಮನಸ್ಸುವುಳ್ಳವರಾಗಿದ್ದು ಇಂದು ವಿಶ್ವವ್ಯಾಪಿಯಾಗಿ ನೆಲೆಯಾಗಿದ್ದಾರೆ. ತುಳುನಾಡ ಸಂಸ್ಕೃತಿಯನ್ನು ಮೆರೆಸಲು ತುಳುವರ ಇಚ್ಚಾಶಕ್ತಿಯನ್ನು ಗುರುತಿಸುವ ಹೊಣೆಗಾರಿಕೆ ನಮ್ಮದಾಗಿದೆ.

ರಾಷ್ಟ್ರದ ಕೇಂದ್ರಾಡಳಿತ ಪ್ರದೇಶದಲ್ಲಿ ಕರ್ನಾಟಕ ಸರಕಾರದ ವಿಶೇಷ ಪುರಸ್ಕಾರ ತುಳು ಮಾತೃ ಭಾಷೆಯ ಮೂಲಕ ಗೌರವಿಸುವುದೇ ನಮ್ಮ ಜವಾಬ್ದಾರಿಯಾಗಿದ್ದು ಈ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೌಲ್ಯವರ್ಧನವಾದಾಂತಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸರ್ ತಿಳಿಸಿದರು.

ಗುಜರಾತ್ ರಾಜ್ಯದ (ವಾಪಿ) ದಮಾನ್ ಇಲ್ಲಿನ ಕೋಲಿ ಸಮಾಜ ಸಭಾಗಂಣದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಐಸಿರಿ (ರಿ.) ವಾಪಿ ಗುಜರಾತ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಸಲ್ಪಟ್ಟ ಸಿರಿಚಾವಡಿ ಪುರಸ್ಕಾರ ಪ್ರದಾನ ಸಮಾರಂಭಕ್ಕೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿ ಪುರಸ್ಕಾರ ಪ್ರದಾನಿಸಿ ಕತ್ತಲ್‌ಸರ್ ಮಾತನಾಡಿದರು.

ಸೋನೊಡ್ ಆಟಿದ ನೆಂಪು (ಶ್ರಾವಣ ಮಾಸದಲ್ಲಿ ಆಷಾಢದ ನೆನಪು) ವಿಚಾರವಾಗಿ ಮಾತನಾಡಿದ ಕತ್ತಲ್‌ಸರ್ ಪಂಚವರ್ಣದ ಪುಂಚದ ಮಣ್ಣಿನಲ್ಲಿ ನಮ್ಮೆಲ್ಲರನ್ನು ಸಾಕಿದ ತುಳುಮಾತೆ ಇಂದು ಜಾಗತಿಕವಾಗಿ ಮೆರೆದಿರುವುದು ತುಳುವರ ಅಭಿಮಾನವಾಗಿದೆ. ಸುಮಾರು ಎರಡೂವರೆ ಕೋಟಿ ಜನ ಸಂಖ್ಯೆಯ ತುಳುವರುವಿದ್ದು ತುಳುಭಾಷಾ ಸಂಸ್ಕೃತಿಗೆ ಕೊಡುಗೆ ನೀಡುತ್ತಿರುವುದು ಸ್ತುತ್ಯಾರ್ಹ ಎಂದರು.

ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ದಿನಪೂರ್ತಿಯಾಗಿಸಿ ಜರುಗಿದ ಸೋನೊಡ್ ಆಟಿದ ನೆಂಪು ತುಳು ಚಾವಡಿ ಕಾರ್ಯಕ್ರಮವನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಗುರುವಾಯನಕೆರೆ ಹಿಂಗಾರ ಅರಳಿಸಿ ಕಳಸೆಯಲ್ಲಿಸಿ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ಬಳಿಕ ತುಳುನಾಡ ಐಸಿರಿ ವೆಬ್‌ಸೈಟ್ ಅನಾವರಣ ಗೊಳಿಸಿದರು.

ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಬಿಲ್ಲವ ಸಂಘ ಗುಜರಾತ್ ಗೌರವಾಧ್ಯಕ್ಷ ದಯಾಂದ ಆರ್.ಬೋಂಟ್ರಾ, ತುಳು ಸಂಘ ಬರೋಡ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ರಮೇಶ್ ಭಂಡಾರಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಘಟಕಾಧ್ಯಕ್ಷ ಅಜಿತ್ ಎಸ್.ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಎಲ್.ಶೆಟ್ಟಿ, ಕರ್ನಾಟಕ ಸಮಾಜ ಸೂರತ್‌ನ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನರೇಂದ್ರ ಕಡೆಕಾರು ಹಾಗೂ ಪಿ.ಎಂ ರವಿ ಮಡಿಕೇರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ತುಳು ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿನ ಸಿರಿಚಾವಡಿ ಪುರಸ್ಕಾರವನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಗುರುವಾಯನಕೆರೆ ಇವರಿಗೆ (ಸಿರಿಚಾವಡಿ ಗೌರವ ಪುರಸ್ಕಾರ), ಅಜಿತ್ ಎಸ್.ಶೆಟ್ಟಿ ಅಂಕ್ಲೇಶ್ವರ್ (ಸಿರಿಚಾವಡಿ ಯುವ ಸಾಧಕ ಪುರಸ್ಕಾರ), ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ (ಸಿರಿಚಾವಡಿ ಮಾಧ್ಯಮ ಪುರಸ್ಕಾರ), ಕು| ತ್ರಿಶಾ ಶೆಟ್ಟಿ (ಸಿರಿಚಾವಡಿ ಬಾಲ ಸಾಧಕಿ ಪುರಸ್ಕಾರ ಪರವಾಗಿ ಮಹಿಳಾ ವೃಂದವು ಸ್ವೀಕರಿಸಿತು) ಹಾಗೂ ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ರಿ.) ವಾಪಿ (ಸಿರಿಚಾವಡಿ ಸಂಘಟನಾ ಪುರಸ್ಕಾರ ಪರವಾಗಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ಮತ್ತು ಪದಾಧಿಕಾರಿಗಳು) ಇವರಿಗೆ ದಯಾನಂದ ಕತ್ತಲ್‌ಸರ್ ಅವರು ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಸನ್ಮಾನಿಸಲಾಯಿತು.

ಗುಜರಾತ್ ತುಳು ಬಾಂಧವರ ತುಳು ಭಾಷಾಪೋಷಣಾ ಶ್ರಮ ಅನನ್ಯವಾದುದು. ದೇಶದಲ್ಲೇ ಏಕೈಕ ತುಳು ಚಾವಡಿ ಇದ್ದರೆ ಅದು ಬರೋಡಾದಲ್ಲಿದೆ ಇದು ಇಲ್ಲಿನ ತುಳುವರ ಶ್ರಮವಾಗಿದ್ದು ಇದು ತುಳು ಭಾಷಾ ಪ್ರೇಮದ ಶಕ್ತಿಯ ತಾಣವಾಗಿದೆ. ತುಳು ಅಕಾಡೆಮಿ ನನಗೆ ಪ್ರಾಪ್ತಿಸಿದ ಈ ಗೌರವ ಗುಜರಾತ್‌ನ ಎಲ್ಲಾ ತುಳುವರಿಗೆ ಸಂದ ಗೌರವವಾಗಿದ್ದು ನಾನು ಸಂತೋಷ ಪೂರ್ವಕವಾಗಿ ಸ್ವೀಕರಿಸುವೆ ಎಂದು ಪುರಸ್ಕಾರಕ್ಕೆ ಉತ್ತರಿಸಿ ಶಶಿಧರ ಶೆಟ್ಟಿ ತಿಳಿಸಿದರು.

ಪಾಲೆತ್ತಾಡಿ ಮಾತನಾಡಿಗುಜರಾತ್ ಮಣ್ಣಿನಲ್ಲಿ ತುಳು ಕನ್ನಡ ಬೆಳೆಸಿ ಪೋಷಿಸಿದ ಹಿರಿಮೆ ಇಲ್ಲಿನ ತುಳುವರ ಭಾಷಾಭಿಮಾನವಾಗಿದೆ. ಅಕಾಡೆಮಿ ಆಗಲಿ ಯಾವುದೇ ಸಂಘ ಸಂಸ್ಥೆಗಳಾದರೂ ಜನಗಳ ಮಧ್ಯೆ ಹೋದಾಗಲೇ ಸರಕಾರ, ಸಂಸ್ಥೆಗಳು ಮೌಲ್ಯದಾಯಕವಾಗುತ್ತವೆ. ಪ್ರಸ್ತುತ ಅಭಿವೃದ್ಧಿ, ಬದಲಾವಣಾ ಯುಗದ ಕಾಲಚಕ್ರದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಕಾಲಘಟ್ಟದಲ್ಲೂ ನಮ್ಮ ಮಾತೃಸಂಸ್ಕöÈತಿ ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ಮತ್ತು ಐಸಿರಿಯ ಸೇವೆ ಪ್ರಶಂಸನೀಯ ಎಂದರು.

ದಯಾನಂದ ಬೋಂಟ್ರಾ ಮಾತನಾಡಿ ಗುಜರಾತ್, ಬರೋಡಾದಲ್ಲಿ ಸುಮಾರು ೩೫ ವರ್ಷಗಳಿಂದ ತುಳು ಮಾತೃಸೇವೆ ನಡೆಯುತ್ತಿದೆ. ಹೊರನಾಡ ಗುಜರಾತ್‌ನಲ್ಲಿ ತುಳುವ ಸಂಘಟನೆ ಮೂಲಕ ಸಾವಿರಾರು ತುಳುವರು ಮಾತೃ ಭಾಷೆಯ ಮೂಲಕ ಒಂದಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಬಾಲಕೃಷ್ಣ ಎಸ್.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಅಮ್ಮ ಹಾಲುನ್ನಿಸುವಾಗ ಜೋಗುಳ ಹೇಳುತ್ತಾ ಕಲಿಸಿದ ಭಾಷೆಯೇ ಮಾತೃ ಭಾಷೆಯಾಗಿದೆ. ಹೊಟ್ಟೆಪಾಡನ್ನು ಹರಸಿ ಹೊರನಾಡ ಗುಜರಾತ್‌ಗೆ ಬಂದರೂ ಸುಖ ಕಷ್ಟಗಳಿಗೆ ಸ್ಪಂದಿಸಲು ಈ ಐಸಿರಿ ಸಂಸ್ಥೆ ಆಸ್ತಿತ್ವಕ್ಕೆ ತರಲಾಗಿತ್ತು. ಭಾಷೆಯ ಕಸುಬುಗೆ ತಕ್ಕವಾಗಿ ಮಾಡಿದ ಜಾತೀಯ ವಿಭಜನೆಯೇ ಹೊರತು ಮಾನವಕುಲದ ವಿಭಜನೆಯಲ್ಲ. ಅಂತೆಯೇ ಈ ಸಂಸ್ಥೆಯೂ ಮನುಕುಲದ ಸೇವೆಗೆ ಮಾತೃಭಾಷೆಯ ಮೂಲಕ ಗುಜರಾತ್‌ವಾಸಿ ತುಳು ಕನ್ನಡಿಗರನ್ನು ಒಗ್ಗೂಡಿಸಿ ಮಾತೃಭಾಷಾ ಪೋಷಣೆಗೆ ಬದ್ಧವಾಗಿ ಮುನ್ನಡೆಯುತ್ತಿದೆ ಎಂದರು.

ತುಳುನಾಡ ಐಸಿರಿ (ವಾಪಿ) ಗೌರವಾಧ್ಯಕ್ಷ ಸದಾಶಿವ ಜಿ.ಪೂಜಾರಿ, ಉಪಾಧ್ಯಕ್ಷ ನವೀನ್ ಎಸ್.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜೊತೆ ಕಾರ್ಯದರ್ಶಿ ಸುಕೇಶ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಂಚಾಲಕ ಪುಷ್ಪರಾಜ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಬಿ.ಶೆಟ್ಟಿ, ಕಾರ್ಯದರ್ಶಿ ಅರುಂಧತ್ತಿ ಶೆಟ್ಟಿ ಇತರ ಪದಾಧಿಕಾರಿಗಳು ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಬಾಲಕೃಷ್ಣ ಎಸ್.ಶೆಟ್ಟಿ ಸ್ವಾಗತಿಸಿದರು. ಪ್ರಫುಲ್ಲಾ ಶೆಟ್ಟಿ, ಶಾಲಿನಿ ಶೆಟ್ಟಿ, ಸೃಷ್ಟಿತಾ ಯು.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಸಚಿನ್ ಪೂಜಾರಿ, ಪಿ.ಎಂ ರವಿ ಪುರಸ್ಕೃತರನ್ನು ಪರಿಚಯಿಸಿದರು. ಗತ ಸಾಲಿನಲ್ಲಿ ಅಗಲಿದ ಐಸಿರಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು ನವೀನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಕೇಶವ ಪೂಜಾರಿ, ಕಾಂತಿ ಎಸ್.ಶೆಟ್ಟಿ, ಸೃಷ್ಟಿತಾ ಯು.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಕಡೆಕಾರು ತುಳು ಅಕಾಡೆಮಿ ಬಗ್ಗೆ ಮಾಹಿತಿ ನೀಡಿ ಪುರಸ್ಕಾರ ಕಾರ್ಯಕ್ರಮ ನಿರೂಪಿಸಿದರು.

ಗೌ| ಪ್ರ| ಕಾರ್ಯದರ್ಶಿ ಉದಯ ಬಿ.ಶೆಟ್ಟಿ ವಂದಿಸಿದರು. ಚಂದ್ರಿಕಾ ಕೋಟ್ಯಾನ್ ಬಳಗವು ಆಟಿ ಕಳಂಜಾ, ಕಂಗೀಲು ನೃತ್ಯಗಳನ್ನು ಪ್ರಸ್ತುತ ಪಡಿಸಿದ್ದು, ತುಳುನಾಡ ಜಾನಪದ ಆಟೋಟ, ಸಾಂಪ್ರದಾಯಿಕ ತಿಂಡಿತಿನಿಸಿಸುಗಳ ಮೇಳೈಕೆಯೊಂದಿಗೆ ಕಾರ್ಯಕ್ರಮ ಸಮಾಪನ ಕಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter