ಅಗ್ನಿಪಥ್ ಯೋಜನೆ – ಇಲ್ಲಿಯವರೆಗೆ 1.83 ಲಕ್ಷ ನೋಂದಣಿ
ನವದೆಹಲಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆ(ಐಎಎಫ್) ನೇಮಕಾತಿಗೆ 1.83 ಕ್ಕೂ ಹೆಚ್ಚು ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಜೂನ್ 14ರಂದು ಅಗ್ನಿಪಥ್ ಯೋಜನೆಯನ್ನು ಕೇಂದ್ರ ಅನಾವರಣಗೊಳಿಸಿತ್ತು. ಇಲ್ಲಿಯವರೆಗೆ 1.83 ಲಕ್ಷಕ್ಕೂ ಅಧಿಕ ಅಗ್ನಿವೀರ್ ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನಾಂಕವಾಗಿರುತ್ತದೆ ಎಂದು ಕೇಂದ್ರ ತಿಳಿಸಿದೆ.
ಭಾರತೀಯ ಸೇನೆಗೆ ಸೇರುವ ಯುವ ಆಕಾಂಕ್ಷಿಗಳಿಗೆ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಘೋಷಿಸಿದ್ದಾಗ ಇದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ವಿರೋಧ ಪಕ್ಷಗಳು ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದವು.
ಯೋಜನೆಯನ್ನು ವಿರೋಧಿಸಿದ್ದ ಪ್ರತಿಭಟನಾಕಾರರು ರೈಲು, ಬಸ್ಸು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಪ್ರತಿಭಟನೆಯಿಂದ ಸುಮಾರು 1,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.